ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಹೊಸಕೋಟೆ- ಬೂದಿಗೆರೆ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಳಪೆ ಕಾಮಗಾರಿ ಹಾಗೂ ವಿಳಂಬ ಖಂಡಿಸಿ ಬೂದಿಗೆರೆಯಲ್ಲಿ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ವಿಮಾನ ನಿಲ್ದಾಣಕ್ಕೆ ಹೋಗುವ 24 ಕಿಮೀ ರಸ್ತೆಯನ್ನು ಸುಮಾರು 6 ವರ್ಷಗಳಿಂದ ನಡೆಸಲಾಗುತ್ತಿದೆ. ಆದರೆ ಕಾಮಗಾರಿ ಪೂರ್ಣವಾಗದೆ, ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ. ಗುತ್ತಿಗೆದಾರರಿಗೆ ಕೇಳಿದರೆ ಕೆಆರ್‌ಡಿಸಿಎಲ್‌ಗೆ ಕೇಳಿ ಎಂದು ಹಾರಿಕೆ ಉತ್ತರ ಕೊಡುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಮೂರ್ತಿ ದೂರಿದರು.
ಕಾಮಗಾರಿ ವಿಳಂಬ ವಿರೋಧಿಸಿ ಹಲವು ಹಳ್ಳಿಗಳಲ್ಲಿ ಪ್ರತಿಭಟನೆ ನಡೆಸಿದರು ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ದೂರಿದರು.
ಸ್ಥಳಕ್ಕೆ ಆಗಮಿಸಿದ ಕೆಆರ್‌ಡಿಸಿಎಲ್ ಟೀಮ್ ಲೀಡರ್ ನಾಜೀರ್ ಮಾತನಾಡಿ,ವಿದ್ಯುತ್ ಕಂಬ ಸ್ಥಳಾಂತರ ಹಾಗೂ ರೈತರಿಗೆ ಹಣ ಸಂದಾಯ ಮಾಡುವ ವಿಷಯದಲ್ಲಿ ಗೊಂದಲ ಏರ್ಪಟ್ಟು ಕಾಮಗಾರಿ ವಿಳಂಬವಾಗುತ್ತಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.
ರಾಜ್ಯಸ್ವ ನಿರೀಕ್ಷಕ ಜನಾರ್ದನ್, ವಿಎಸ್ಸೆಸ್ಸೆನ್ ಮಾಜಿ ಅಧ್ಯಕ್ಷ ಹಿತ್ತರಹಳ್ಳಿ ರಮೇಶ್, ಗ್ರಾಪಂ ಉಪಾಧ್ಯಕ್ಷ ರಿಜ್ವಾನ್ ನಜಿರ್ ಅಹಮದ್, ಗ್ರಾಪಂ ಮಾಜಿ ಸದಸ್ಯ ಎ.ವಿ.ಆರ್.ಪ್ರಭಾಕರ್, ಮುಖಂಡರಾದ ನವೀನ್, ಗಜೇಂದ್ರಪ್ಪ, ವೆಂಕಟೇಶ್, ನಾಗೇಶ್, ಅನಂತರಾಜ್ ಇದ್ದರು.