ನೇಹಾ ಹತ್ಯೆ ಖಂಡಿಸಿ ಮಲೆನಾಡು ವೀರಶೈವ ಸಮಾಜದ ವತಿಯಿಂದ ಸಕಲೇಶಪುರದಲ್ಲಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಹುರುಡಿ ಅರುಣ್,ಪ್ರಶಾಂತ್, ಗಗನ್, ಸಂಗಪ್ಪ ಇತರರಿದ್ದರು. 
ಜಿಲ್ಲೆ

ಮಲೆನಾಡು ವೀರಶೈವ ಸಮಾಜ ಪ್ರತಿಭಟನೆ

ಸಕಲೇಶಪುರ: ಹುಬ್ಬಳಿಯ ನೇಹಾ ಹತ್ಯೆ ಮಾಡಿದವನನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿ ಮಲೆನಾಡು ವೀರಶೈವ ಸಮಾಜದ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.

ಲವ್ ಜಿಹಾದ್ ಬಲೆಗೆ ಸಿಲುಕದ ಯುವತಿಯನ್ನು ಹತ್ಯೆ ಮಾಡಲಾಗಿದೆ. ಅಮಾನುಷವಾಗಿ ವರ್ತಿಸಿರುವ ಈ ವ್ಯಕ್ತಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕು. ಸರ್ಕಾರದ ನಡೆ ಆರೋಪಿಯ ಪರವಾಗಿದ್ದು, ಪ್ರೇಮ ಪ್ರಕರಣ ಎಂದು ಹೇಳುವ ಮೂಲಕ ಗೃಹಸಚಿವರು ತಾವೇ ನ್ಯಾಯ ನಿರ್ಣಯ ಮಾಡಿದ್ದಾರೆ. ಇದು ಮೃತ ಯುವತಿಯ ಕುಟುಂಬದ ಮಾನಹಾನಿಗೆ ಕಾರಣವಾಗಿದೆ. ತಕ್ಷಣವೇ ಗೃಹಸಚಿವರು ಯುವತಿಯ ಕುಟುಂಬದ ಕ್ಷಮೆ ಕೇಳಬೇಕು ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಉಪವಿಭಾಗಾಧಿಕಾರಿ ಡಾ.ಕೆ.ಎಂ.ಶ್ರುತಿ ಅವರಿಗೆ ಮನವಿ ಸಲ್ಲಿಸಲಾಯಿತು. ಹುರುಡಿ ಅರುಣ್,ಪ್ರಶಾಂತ್, ಗಗನ್, ಸಂಗಪ್ಪ, ಬನ್ನಹಳ್ಳಿಪುನೀತ್, ಸಾಗರ್, ಶಶಿಕುಮಾರ್, ನೇತ್ರಾವತಿ, ಮಾಸ್ತಾರೆ ಲೋಕೇಶ್, ಜಯಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.