ರಾಯಚೂರು ತಾಲೂಕಿನ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಮಹತ್ಮಾಗಾಂಽ ನರೇಗಾ ಯೋಜನೆಯ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡ ಅಽಕಾರಿಗಳನ್ನು ಅಮಾನತ್ತು ಗೊಳಿಸುವಂತೆ ಒತ್ತಾಯಿಸಿ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯಿAದ ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಜನಗಳನ್ನು ಕರೆದುಕೊಂಡು ಹೋಗದೆ ಭ್ರಷ್ಟಾಚಾರ ಮಾಡುವ ಸಲುವಾಗಿ ಹಿಂದಿನ ಯಾವುದೋ ಒಂದು -ೆÇÃಟೋವನ್ನೇ ಹಿಡಿದುಕೊಂಡು ಎನ್‌ಎಂಎAಎಸ್ ಮಾಡಿದ್ದು,ಎನ್‌ಎಂಆರ್ ಪ್ರತಿಯಲ್ಲಿ ಮಹಿಳೆಯರಿದ್ದರೂ ಪುರುಷರು ಮಾತ್ರ ನಿಂತುಕೊAಡು -ÉÇÃಟೋ ತೆಗೆಯುತ್ತಾರೆ ಎಂದು ಆರೋಪಿಸಿದರು.
ಇಂಜಿನಿಯರ್‌ಗಳು ಮತ್ತು ತಾಂತ್ರಿಕ ಸಂಯೋಜಕರು ಮತ್ತು ಸಹಾಯಕ ನಿರ್ದೇಶಕರು ಸ್ಥಳಕ್ಕೆ ಹೋಗದೆ ಚೆಕ್ ಮೆಜರ್ಮೆಂಟ್ ಬರೆಯುತ್ತಿದ್ದಾರೆ. ಸ್ಥಳ ಪರಿಶೀಲನೆ ಮಾಡದೆ ಪಂಚಾಯತಿ ಅಭಿವೃದ್ಧಿ ಅಽಕಾರಿಗಳು ಎಂಐಎಸ್ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕೂಡಲೇ ಜಿಲ್ಲಾ ಪಂಚಾಯಿತಿಯಿAದ ಪ್ರತ್ಯೇಕವಾಗಿ ತಂಡ ರಚಿಸಿ ಸಂಪೂರ್ಣ ಕಾಮಗಾರಿಗಳನ್ನು ತನಿಖೆ ಮಾಡಿಸಿ ಇದರಲ್ಲಿ ಭಾಗಿಯಾದ ಎಲ್ಲಾ ಅಽಕಾರಿಗಳನ್ನು ವಿಚಾರಣೆಯನ್ನು ನಡೆಸಿ ಅಮಾನತ್ತು ಆದೇಶವನ್ನು ಹೊರಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ರಾಜ್ಯಾಧ್ಯಕ್ಷ ಡಾ.ರಾಘವೇಂದ್ರ ಎಸ್.ಆರ್, ಪ್ರಮುಖರಾದ ವೆಂಕಟೇಶ ನಾಯಕ, ಶಣ್ಮುಖಪ್ಪ ಘಂಟಿ, ಜಿಲ್ಲಾಧ್ಯಕ್ಷರಾದ ಸೈಯದ್ ಮಹಿಬೂಬ್, ತಿಮ್ಮಪ್ಪ ಸ್ವಾಮಿ, ಸಾಜೀದ್ ಹುಸೇನ್, -ÉÊಯಾಜ್, ಸದ್ದಂ, ಸಲೀಮ್ ಸೇರಿದಂತೆ ಸಂಸ್ಥೆಯ ಪದಾಽಕಾರಿಗಳು ಇದ್ದರು.