ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ನವಲಕಲ್ ಗ್ರಾ.ಪಂ.ನಲ್ಲಿ ಮನರೇಗಾದ ೧೫ನೇ ಹಣಕಾಸು ಸೇರಿ ಇನ್ನಿತರ ಯೋಜನೆಗಳ ಅನುದಾನದಲ್ಲಿ ಅವ್ಯವಹಾರ ನಡೆಸಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ವಿರೋಽ ಸಂಸ್ಥೆ, ಮಾಹಿತಿ ಹಕ್ಕು ಬಳಕೆದಾರರ ರಾಯಚೂರು ವಿಭಾಗದ ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ನವಲಕಲ್ ಗ್ರಾಪಂನಲ್ಲಿ ೨೦೨೩ ರಿಂದ ಈವರೆಗೆ ೧೫ನೇ ಹಣಕಾಸು, ಶಾಸನಬದ್ಧ ಅನುದಾನ, ಕರವಸೂಲಿ, ಕೂಸಿನ ಮನೆ, ಮತ್ತು ಇತರೆ ಯೋಜನೆಯಡಿ ಅನುದಾನ ವನ್ನು ಗ್ರಾಪಂ ಅಧ್ಯಕ್ಷರು, ಪಿಡಿಒ ಸೇರಿ ಅಽಕಾರಿ ಗಳು ಅನುದಾನ ಬಳಕೆ ಮಾಡದೇ ಕಾಮಗಾರಿ ಬಿಲ್ ಅನುದಾನವನ್ನು ತಮ್ಮ ಸಂಬAಽಕರಿಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ದೂರಿದರು.
ಗ್ರಾಪಂ ಅಭಿ ವೃದ್ಧಿ ಅಽಕಾರಿ ಪಂಚಾಯತಿಗೆ ಬಾರದೇ ಕಂಪ್ಯೂಟರ್ ಆಪರೇಟರ್ ಹಾಗೂ ಅಧ್ಯಕ್ಷ ಅಭಿವೃದ್ಧಿಗೆ ಆಧ್ಯತೆ ನೀಡದೇ ಅನುದಾನ ದುರ್ಬಳಕೆ ಮಾಡಿ ಕೊಂಡಿದ್ದಾರೆ ಎಂದು ಆರೋಪಿಸಿದರು. ೨೦೨೨-೨೩, ೨೦೨೩-೨೪ನೇ ಸಾಲಿನ ೧೫ನೇ ಹಣ ಕಾಸು ಯೋಜನೆಯಲ್ಲಿ ೨೦ ಸಾವಿರ ಹಣ ಲೂಟಿ ಮಾಡಿದ್ದಾರೆ.
ನರೇಗಾದಡಿ ಬೇರೆ ವ್ಯಕ್ತಿಗಳ ಹೆಸರಿಗೆ ಬಿಲ್ ಮಾಡಿದ್ದಾರೆ, ವಸತಿ ಯೋಜನೆಯಡಿ ತಮ್ಮ ಕುಟುಂಬದ ಹೆಸರಿಗೆ, ಶೌಚಾಲಯವೂ ಸಹ ನಿರ್ಮಿಸಿಕೊಂಡು ಹಣ ಲೂಟಿ ಮಾಡಿದ್ದಾರೆ ಎಂದು ಖಂಡಿಸಿದರು ಕೂಡಲೇ ಭ್ರಷ್ಟಾಚಾರದ ಹಣ ವಸೂಲಿ ಮಾಡಬೇಕು,೧೯ ಜನರ ಸದಸ್ಯರ ಸದಸ್ಯತ್ವ ರದ್ದುಪ ಡಿಸಿ, ಗೌರವಧನ ಹಿಂಪಡೆಯಬೇಕು, ಶಾಮೀಲಾದ ತಾಪಂ ಇಒ,ಸಹಾಯಕ ನಿರ್ದೇಶಕ, ಪಿಡಿಒ, ತಾಂತ್ರಿಕ ಅಽಕಾರಿ ಅಮಾನತು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಬೆಟ್ಟಪ್ಪ ಎನ್ ಹೊಕ್ರಾಣಿ, ಕಾರ್ಯಾಧ್ಯಕ್ಷ ದೇವೆಂದ್ರಪ್ಪ ಅರಶಿಣಗಿ, ಕಾರ್ಮಿಕ ಘಟಕದ ಅಧ್ಯಕ್ಷ ತಿಮ್ಮಪ್ಪ ಸ್ವಾಮಿ, ಆನಂದ ಗಂಜಳ್ಳಿ, ಪ್ರಕಾಶ, ನಾಡಂಗಿ ಬಸವರಾಜ ಸೇರಿದಂತೆ ಅನೇಕರು ಇದ್ದರು.