ವಾಲ್ಮೀಕಿ ನಿಗಮದಲ್ಲಾದ ಹಗರಣ ಖಂಡಿಸಿ ಶ್ರೀ ಮಹರ್ಷಿ ವಾಲ್ಮಿಕಿ ಗ್ರಾಮೀಣಾಭಿವೃದ್ಧಿ ಸಂಘದಿಂದ ಕಲಾದಗಿ ಉಪತಹಸೀಲ್ದಾರ್ ಆರ್. ಆರ್. ಕುಲಕರ್ಣಿಗೆ ಮನವಿ ಸಲ್ಲಿಸಲಾಯಿತು. ಯುವ ಮುಖಂಡ ಹನುಮಂತ ತಳವಾರ, ಯಮನಪ್ಪ ತಳವಾರ, ಭೀಮಣ್ಣ ದಳವಾಯಿ ಇತರರಿದ್ದರು. 
ಜಿಲ್ಲೆ

ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ಪ್ರತಿಭಟನೆ

ದತ್ತಾತ್ರೇಯ ಪಿ ಕುಲಕರ್ಣಿ

ಕಲಾದಗಿ: ರಾಜ್ಯ ವಾಲ್ಮೀಕಿ ನಿಗಮದಲ್ಲಾದ ಹಗರಣ ಖಂಡಿಸಿ ಗ್ರಾಮದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಗ್ರಾಮೀಣಾಭಿವೃದ್ಧಿ ಸಂಘದ ನೇತೃತ್ವದಲ್ಲಿ ವಾಲ್ಮೀಕಿ ಸಮಾಜದಿಂದ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಗ್ರಾಮದ ಗಡ್ಡಿ ಓಣಿಯಿಂದ ವಿವಿಧ ಘೋಷಣೆ ಕೂಗುತ್ತ ಹೊರಟ ಪ್ರತಿಭಟನಾ ಮೆರವಣಿಗೆ ಹೊಸೂರ ಚೌಕ, ಬಸವಣ್ಣದೇವರ ಗುಡಿ ಓಣಿ, ಕೊಬ್ರಿ ಕ್ರಾಸ್, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ನಾಡಕಚೇರಿಗೆ ತೆರಳಿ ಸಭೆಯಾಗಿ ಮಾರ್ಪಟ್ಟಿತು.

ಯುವ ಮುಖಂಡ ಹನುಮಂತ ತಳವಾರ, ಯಮುನಪ್ಪ ತಳವಾರ, ಭೀಮಣ್ಣ ದಳವಾಯಿ ಮಾತನಾಡಿ, ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಮೀಸಲಾಗಿದ್ದ ಕೋಟಿ ಲೆಕ್ಕದ ಅನುದಾನವನ್ನು ತಮ್ಮ ವೈಯಕ್ತಿಕ ಕೆಲಸಗಳಿಗೆ ದುರ್ಬಳಕೆ ಮಾಡಿಕೊಂಡು ಸಮಾಜಕ್ಕೆ ಅನ್ಯಾಯ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕೂಡಲೇ ದುರ್ಬಳಕೆ ಮಾಡಿಕೊಂಡಿರುವ ಅನುದಾನವನ್ನು ನಿಗಮಕ್ಕೆ ಮರಳಿ ಕೊಟ್ಟು ನಿಗಮದ ಆಶಯಗಳಂತೆ ಅದನ್ನು ಬಳಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಉಪತಹಸೀಲ್ದಾರ್ ಆರ್.ಆರ್. ಕುಲಕರ್ಣಿ ಮನವಿ ಸ್ವೀಕರಿಸಿದರು.

ಸಮಾಜದ ಮುಖಂಡರಾದ ರಾಮಣ್ಣ ತಳವಾರ, ಹನುಮಂತ ಗದ್ದನಕೇರಿ, ದುರ್ಗಪ್ಪ ಹಾದಿಮನಿ, ಲಕ್ಷ್ಮಣ ದಂಡಿನ, ಅಯ್ಯಪ್ಪ ದಂಡಿನ, ರಾಮಣ್ಣ ಕ್ವಾಟಿ, ಮಹೇಶ ಆಡಗಲ್ಲ ಇತರರಿದ್ದರು.