ಜಿಲ್ಲೆ

ಕೇಂದ್ರದ ನಡೆ ಖಂಡಿಸಿ ಪ್ರತಿಭಟನೆ ನಾಳೆ

ಎಂ.ಎಸ್​.ಹಿರೇಮಠ ಬೆಳಗಾವಿ

ಮೂಡಲಗಿ: ಕೇಂದ್ರ ಸರ್ಕಾರ ನಿಯೋಜಿಸಿರುವ 8ನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಪಿಂಚಣಿ ಪರಿಷ್ಕರಿಸದಿರುವುದು, ತುಟ್ಟಿ ಭತ್ಯೆ ನಿಲ್ಲಿಸುವ ಬಗ್ಗೆ

ಚರ್ಚೆಯಾಗಿರುವುದನ್ನು ಖಂಡಿಸಿ ಜು.21ರಂದು ಪಟ್ಟಣದಲ್ಲಿ ಪ್ರತಿಭಟಿಸಲಾಗುವುದು.ಕೇಂದ್ರ ಸರ್ಕಾರ ವೇತನ ಭತ್ಯೆ, ಪಿಂಚಣಿ ಪರಿಷ್ಕರಿಸಲು 8ನೇ ಆಯೋಗ ರಚಿಸಿದೆ. ಆದರೆ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಮಾರ್ಚ್​ 25ರಂದು ಲೋಕಸಭೆಯಲ್ಲಿ ಆರ್ಥಿಕ ಬಿಲ್​ ಮಂಡಿಸುವ ಸಂದರ್ಭದಲ್ಲಿ 1&4&2026ರ ಪೂರ್ವದಲ್ಲಿ ನಿವೃತ್ತರಾಗಿರುವ ಎಲ್ಲ ಪಿಂಚಣಿದಾರರಿಗೆ 8ನೇ ವೇತನ ಆಯೋಗದಲ್ಲಿ ಪಿಂಚಣಿ ಪರಿಷ್ಕರಿಸುವುದು ಕಷ್ಟಸಾಧ್ಯ ಮತ್ತು ಅವರಿಗೆ ಮುಂಬರುವ ತುಟ್ಟಿ ಭತ್ಯೆಗಳನ್ನು ಸಹ ನಿಲ್ಲಿಸಬಹುದಾಗಿದೆ ಎಂದು ತಿಳಿಸಿ ಆತಂಕ ಮೂಡಿಸಿದ್ದಾರೆ.

ಇದನ್ನು ಖಂಡಿಸಿ ಪ್ರಧಾನಿಮಂತ್ರಿಗಳ ಗಮನ ಸೆಳೆಯಲು ಅಂದು ಬೆಳಗ್ಗೆ 10 ಗಂಟೆಗೆ ಸಹಿ ಸಂಗ್ರಹಿಸುವ ಆಂದೋಲನಕ್ಕಾಗಿ ಎಸ್​ಎಸ್​ಆರ್​ ಕಾಲೇಜು ಬಳಿ ಸಮಾವೇಶಗೊಳ್ಳಬೇಕು ಎಂದು ಪ್ರೊ. ಕಮದಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.