ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯುತ್ತಿರುವ ಹಾಗೂ ಮುಸ್ಲಿಂ ತುಷ್ಟೀಕರಣ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಸಸ್ಭಾವ ವೇದಿಕೆಯಿಂದ ಅ. 19ರಂದು ಸಂಜೆ 5 ಗಂಟೆಗೆ ನಗರದ ಮೂರುಸಾವಿರ ಮಠ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ.
ಕುಂದಗೋಳ ಕಲ್ಯಾಣ ಮಠದ ಶ್ರೀ ಬಸವಣ್ಣಜ್ಜ ಸ್ವಾಮಿ ಹಾಗೂ ಶ್ರೀ ಮಹಾಂತ ಶಿವಾನಂದ ಸ್ವಾಮಿ, ಸಾಧು ಸಂತರು ಹಾಗೂ ಪ್ರಮು ಖರು ಭಾಗವಹಿಸಲಿದ್ದಾರೆ ಎಂದು ವೇದಿಕೆ ಸಂಯೋಜಕ ಮಹಾದೇವ ಕರಮರಿ ಹಾಗೂ ಸಹ ಸಂಯೋಜಕ ಶಂಕರಣ್ಣ ಮುನವಳ್ಳಿ ತಿಳಿಸಿದ್ದಾರೆ.