ವಿಜಯವಾಣಿ ಸುದ್ದಿಜಾಲ ಗದಗ
ಗ್ರಾಮೀಣಾಭಿವೃದ್ಧಿ ವಿವಿ ನಿರ್ಮಾಣಕ್ಕೆ ಭೂ ಸ್ವಾಧಿನ ಪಡಿಸಿಕೊಂಡ ಸ.ನಂ. 143 ಮತ್ತು 179ರ 124 ಮತ್ತು 129 ಎಕರೆ ಕೃಷಿ ಭೂಮಿಯ ಪರ್ಯಾಯವಾಗಿ ರೈತರಿಗೆ ಸಮರ್ಪಕ ಪರಿಹಾರ ಒದಗಿಸುವಲ್ಲಿ ಮತ್ತು ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸುವಲ್ಲಿ ಸಚಿವರು ಮತ್ತು ರಾಜ್ಯ ಸರ್ಕಾರ ವಿಲವಾಗಿದೆ ಎಂದು ಅನಿಲ ಮೆಣಸಿನಕಾಯಿ ಆರೋಪಿಸಿದರು.
ಉತ್ತರ ಕರ್ನಾಟಕ ಮಹಾಸಭಾ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಪಾದಯಾತ್ರೆ, ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರೈತರಿಂದ ಕೃಷಿಭೂಮಿಯನ್ನು ಕಸಿದು ಅವರನ್ನು ಬೀದಿಪಾಲು ಮಾಡುತ್ತಿರುವುದು ಖಂಡನೀಯ. ವಿವಿ ಸ್ಥಾಪನೆಗೂ ಮೊದಲು ಹಕ್ಕ್ಕುಪತ್ರ, ಪರಿಹಾರ ನೀಡಲು ಸಾಕಷ್ಟು ಬಾರಿ ಜಿಲ್ಲಾಡಳಿತಕ್ಕೆ ರೈತರು ಮನವಿ ಮಾಡಿದ್ದರು ಸೂಕ್ತ ಸ್ಪಂದನೆ ಸಿಕ್ಕಿಲ್ಲ. ರೈತರ ಬದುಕು ಧಮನ ಮಾಡುವ ಬೆಳವಣಿಗೆ ಇದಾಗಿದೆ ಎಂದರು.
ಸಾಮಾಜಿಕ ನ್ಯಾಯದಡಿ ಸೂಕ್ತ ಪರಿಹಾರ ಒದಗಿಸಬೇಕಿತ್ತು. ರೈತರಿಂದ ಆಕ್ಷೇಪಣೆಗಳನ್ನು ಪಡೆದು ಪರಿಹಾರ ನೀಡುವ ಭರವಸೆ ನೀಡಿದ್ದ ಸಚಿವರು ಇನ್ನೂ ಪರಿಹಾರ ಒದಗಿಸದೇ ರೈತರಿಗೆ ಮೋಸಮಾಡಿದ್ದಾರೆ. ವಿವಿ ಆಡಳಿತ ಮಂಡಳಿ ರೈತರನ್ನು ಒಕ್ಕಲೆಬ್ಬಿಸುತ್ತಿದೆ. ತಡೆಗೋಡೆ ನಿರ್ಮಾಣ ಮಾಡುತ್ತಿದೆ. ರೈತರ ಜಮೀನುಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಹಮ್ಮಿಕೊಳ್ಳುತ್ತಿದೆ. ಭೂಮಿಯಲ್ಲಿ ಬೆಳೆದ ಬೆಳೆಗಳನ್ನು ಲೆಕ್ಕಿಸದೇ ಪದೇ ಪದೆ ರೈತರಿಗೆ ಕಿರುಕುಳ ನೀಡುವ ಪ್ರಕರಣ ಬೆಳಕಿಗೆ ಬರುತ್ತಿವೆ. ರಾಜಕಾರಣಿಗಳ ಒತ್ತಡಕ್ಕೆ ಮಣಿದ ಕಂದಾಯ ಇಲಾಖೆಯು ಬೂ ಸ್ವಾಧಿನ ಪ್ರಕ್ರಿಯೆಯಲ್ಲಿ ದಾಖಲಾತಿ ನ್ಯಾಯಬದ್ಧ ಅಲ್ಲದ ರಾಜಕೀಯ ಹಿಂಬಾಲಕರಾದ ಒಂದೇ ಕುಟುಂಬಕ್ಕೆ 11 ಕೋಟಿ ರೂ. ಪಾವತಿ ಮಾಡಿ ಇನ್ನೂಳಿದ ಎಲ್ಲ ರೈತರನ್ನು ಕೈಬಿಟ್ಟಿದೆ ಎಂದು ಅನಿಲ ಮೆಣಸಿನಕಾಯಿ ಗಂಭೀರ ಆರೋಪ ಮಾಡಿದರು.
ಉತ್ತರ ಕನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಕಾಂದಾಯ ಇಲಾಖೆ ರಾಜಕೀಯ ವ್ಯಕ್ತಿಗಳ ಜತೆ ಶಾಮೀಲಾಗಿ ರೈತರ ನೂರಾರು ಎಕೆರೆ ಜಮೀನು ವಶಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದೆ ಎಂದು ಆರೋಪಿಸಿದರು. ಬಗರ್ ಹುಕುಂ ಸಾಗುವಳಿ ರೈತರಿಗೆ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿದ ರವಿಕಾಂತ್, ಹಕ್ಕುಪತ್ರ ವಿತರಣೆ ಮಾಡಿ ಎಂದು ಹಲವು ವರ್ಷಗಳ ಹೊರಾಟದ ಲವಾಗಿ ಪೊಲೀಸರಿಂದ ಗೋಲಿಬಾರ್ ಪ್ರತಿಲವಾಗಿ ಸಿಕ್ಕಿದೆ ವಿನಃ, ಹಕ್ಕುಪತ್ರ ಮಾತ್ರ ಸಿಕ್ಕಿಲ್ಲ. ಸೊರಟೂರು ಗ್ರಾಮದಲ್ಲಿ ನಡೆದ ಗೋಲಿಬಾರ್ ನಲ್ಲಿ ರೈತರು ಹುತಾತ್ಮರಾದರು. ಕೆಲೂರು ಗ್ರಾಮದ ರೈತ ಮಹಿಳೆ ಅರಣ್ಯ ಇಲಾಖೆ ಕಿರುಕುಳದಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಇಂತಹ ಅವಡಗಳಿಗೆ ಅರಣ್ಯ ಇಲಾಖೆಯೇ ನೇರ ಹೊಣೆ. ಕಪ್ಪತಗುಡ್ಡ ರಕ್ಷಣೆ ಮುಂದಿಟ್ಟುಕೊಂಡು ಬಗರ್ ಹುಕುಂ ರೈತರಿಗೆ ಅರಣ್ಯ ಇಲಾಖೆ ವಿನಾಕಾರಣ ತೊಂದರೆ ನೀಡುತ್ತಿದೆ. ಕೆಲೂರು, ಡಿಣಿ, ಶಿಂಗಟಾಯನಕೇರಿಮ ಅತ್ತಿಕಟ್ಟಿ, ಬಿಡನಾಳ, ವಿರಪಾಪುರ ತಾಂಡಾ, ಮುರಡಿ, ದೇವಿಹಾಳ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಬಗರ್ ಹುಕುಂ ಸಾಗುವಳಿದಾರರು ಇದ್ದಾರೆ. ಸರ್ಕಾರ ಈ ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದು ರವಿಕಾಂತ್ ಅಂಗಡಿ ಆರೋಪಿಸಿದರು.
ನಗರದ ಕಿತ್ತೂರು ಚೆನ್ನಮ್ಮ ವೃತ್ತದಿಂದ ಜಿಲ್ಲಾಡಳಿತದ ವರೆಗೂ ಪಾತ್ರಯಾತ್ರೆ ಮೂಲಕ ಪ್ರತಿಬಟನೆ ಮಾಡಲಾಯಿತು. ಡೊಳ್ಳು ಬಾರಿ ಜನರು ಹಕ್ಕೊತ್ತಾಯ ಮಾಡಿದರು.
ಬಸವಣೆಪ್ಪ ಚಿಂಚಲಿ, ಎನ್.ಟಿ. ಪೂಜಾರ, ಪಿರೋಜ ನದಾ್, ರಾಜು ಲಮಾಣಿ, ಶರಣು ಚಿಂಚಲಿ, ಶಾಂತವ್ವ ಕಗ್ಗೂರು ಇತರರು ಇದ್ದರು.
ರೈತರ ಹಕ್ಕೊತ್ತಾಯ:
- ವಿವಿ ನಿರ್ಮಾಣಕ್ಕೆ ಒಕ್ಕಲೆಬ್ಬಿಸಿದ ರೈತರಿಗೆ ಪರಿಹಾರಕ್ಕೆ ಆಗ್ರಹ.
- ಬಗರ್ ಹುಕುಂ ಸಾಗುವಳಿದಾರರಿಗೆ ಭದ್ರತೆ ಮತ್ತು ನಿರಾಶ್ರಿತರೆಂದು ಘೋಷಣೆ
- ವಿವಿ ನಿರ್ಮಾಣದ ಸಮಯದಲ್ಲಿ ಒಂದೇ ಕುಟುಂಬಕ್ಕೆ 11 ಕೋಟಿ ವರ್ಗಾವಣೆ ತನಿಖೆ ಆಗ್ರಹ.
- ಅರಣ್ಯ ಹಕ್ಕು ಅಧಿನಿಯಮದಡಿ ಹಕ್ಕು ಪತ್ರ ವಿತರಣೆ
- ಅಕ್ರಮ ಎಸಗಿದ ಕಂದಾಯ ಇಲಾಖೆ ಮೇಲೆ ಶಿಸ್ತುಕ್ರಮಕ್ಕೆ ಆಗ್ರಹ