ಬೆಟ್ಟಪ್ಪ ಎನ್.ಹೊಕ್ರಾಣಿ 
ಜಿಲ್ಲೆ

ಅನುದಾನ ದುರ್ಬಳಕೆ ವಿರುದ್ಧ ಪ್ರತಿಭಟನೆ ಇಂದು

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ನವಲಕಲ್ ಗ್ರಾಪಂನಲ್ಲಿ 15ನೇ ಹಣಕಾಸು ಯೋಜನೆ ಅನುದಾನವನ್ನು ಯಾವುದೇ ಕಾಮಗಾರಿ ಕೈಗೊಳ್ಳದೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ಮಾಹಿತಿ ಹಕ್ಕು ಬಳಕೆದಾರರ ವಿಭಾಗದ ಜಿಲ್ಲಾಧ್ಯಕ್ಷ ಎನ್.ಬೆಟ್ಟಪ್ಪ ಹೊಕ್ರಾಣಿ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಆ.15ರಿಂದ 2025ರ ಏ.6ರವರೆಗೆ ನರೇಗಾ, 15ನೇ ಹಣಕಾಸು, ಶಾಸನ ಬದ್ಧ, ಕರ ವಸೂಲಿ, ಕೂಸಿನ ಮನೆ, ಆಶ್ರಯ ಮನೆ ಸೇರಿ ಇತರ ಯೋಜನೆಗಳಲ್ಲಿ ಗ್ರಾಪಂ ಅಧ್ಯಕ್ಷ, ಸದಸ್ಯರು ಹಾಗೂ ಪಿಡಿಒಯಿಂದ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಜಿಪಂ ಸಿಇಒ ಗಮನಕ್ಕೆ ತರಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಏ.16ರಂದು ನಗರದ ಡಿಸಿ ಕಚೇರಿ ಮುಂದಿನ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಂಘದ ಗೌರವಾಧ್ಯಕ್ಷ ಸೂಗಪ್ಪ ವಗ್ಗರ್, ಕಾರ್ಯಾಧ್ಯಕ್ಷ ದೇವೇಂದ್ರಪ್ಪ ಅರಶಿಣಿಗಿ, ಉಪಾಧ್ಯಕ್ಷ ಚನ್ನಬಸವ ಜಾಗೀರ ಜಡಲದಿನ್ನಿ, ಸಂಘಟನಾ ಕಾರ್ಯದರ್ಶಿ ಸಿದ್ದಯ್ಯ ನವಲಕಲ್ ಇದ್ದರು.