ಮೈಸೂರು: ದಲಿತರ ಬಗ್ಗೆ ಹಗುರವಾಗಿ ಮಾತನಾಡಿರುವ ಬೆಂಗಳೂರು ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಫ್ಯಾಂಥರ್ಸ್, ಗಾಂಧಿನಗರ ಸಮಸ್ತ ರಂಗ ಸಂಸ್ಥೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಸಂಜೆ ಪ್ರತಿಭಟನೆ ನಡೆಯಿತು.
ಶಾಸಕರಾಗಿ ಚುನಾಯಿತರಾಗಿ ಎಲ್ಲರನ್ನೂ ಸಮನಾಗಿ ಕಾಣಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದರೂ, ಮುನಿರತ್ನ ಸಂವಿಧಾನ ವಿರುದ್ಧವಾಗಿ ಭಾಷೆ ಬಳಸಿದ್ದಾರೆ. ಇಂತವರು ಜನಪ್ರತಿನಿಧಿಯಾಗಿ ಮುಂದುವರಿಯಲು ಸಾಧ್ಯವಿಲ್ಲ. ಪರಿಶಿಷ್ಠ ಹಾಗೂ ಒಕ್ಕಲಿಗರ ಸಮುದಾಯದ ಬಗ್ಗೆ ಹಗುರವಾಗಿ ಅವಾಚ್ಯ ಶಬ್ದದಿಂದ ಮಾತನಾಡಿದ್ದಾರೆ. ಇವರು ಜನಪ್ರತಿನಿಧಿಯಾಗಿರಲು ಯೋಗ್ಯರಲ್ಲ ಎಂದು ಟೀಕಿಸಿದರು.
ಮುಖಂಡರಾದ ಭಾಸ್ಕರ್, ಶಿವಣ್ಣ, ಮಹದೇವಸ್ವಾಮಿ, ಕುಮಾರ್, ಸುರೇಶ್ ಇತರರು ಇದ್ದರು.