ಲೋಕಾಪುರ ಬಸವೇಶ್ವರ ವೃತ್ತದಲ್ಲಿ ಪಂಚಮಸಾಲಿಗಳ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು. ಪ್ರಕಾಶ ಚುಳಕಿ, ಹೊಳಬಸು ಕಾಜಗಾರ, ರವಿ ಚೌಧರಿ, ಚೇತನ ಕಣಬೂರ ಇದ್ದರು. 
ಜಿಲ್ಲೆ

ಲಾಠಿ ಚಾರ್ಜ್ ವಿರೋಧಿಸಿ ಪ್ರತಿಭಟನೆ

Vijayapura - Desk - Gurappa Lokuri

ಲೋಕಾಪುರ: ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಪಂಚಮಸಾಲಿ ಸಮುದಾಯದ ಮುಖಂಡರ ಮೇಲೆ ಲಾಠಿ ಪ್ರಹಾರ ನಡೆಸಿರುವ ಪೊಲೀಸ್‌ರ ಕ್ರಮ ಖಂಡಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗುರುವಾರ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.

ಪಂಚಮಸಾಲಿ ಸಮಾಜದ ಅಧ್ಯಕ್ಷ ಪ್ರಕಾಶ ಚುಳಕಿ ಮಾತನಾಡಿ, ಹೋರಾಟ ಹತ್ತಿಕ್ಕಲು ಸರ್ಕಾರ ಮುಂದಾಗಿದೆ. ಮುಂಬರುವ ದಿನಗಳಲ್ಲಿ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದರು.

ಸಮಾಜದ ಮುಖಂಡ ಹಾಗೂ ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ, ವೀರರಾಣಿ ಕಿತ್ತೂರ ಚನ್ನಮ್ಮ ಲಿಂಗಾಯತ ಪಂಚಮಸಾಲಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ರವಿ ಚೌಧರಿ, ಚೇತನ ಕಣಬೂರ, ಮಲ್ಲು ಹೆಗ್ಗಳಿಕೆ, ಮುತ್ತಪ್ಪ ಚೌಧರಿ, ಈರಪ್ಪ ಬಲಕಿ, ಲೋಕಣ್ಣ ಮುದ್ನೂರ, ಶ್ರೀಶೈಲ ಕಾಸರ, ಮಲ್ಲು ಉಳ್ಳಾಗಡ್ಡಿ, ನಿಂಗಣ್ಣ ಬಳಿಗಾರ, ಶ್ರೀಧರ ಬಳಿಗಾರ, ರಾಚಪ್ಪ ಬಳಿಗಾರ, ಹೊಳಬಸು ಕಾಸರ, ಶರಣಪ್ಪ ಚೌಧರಿ, ಪ್ರಕಾಶ ಚೌಧರಿ, ಹೊಳಬಸು ಬಳಗಾರ ಪಾಲ್ಗೊಂಡಿದ್ದರು.