ಜಿಲ್ಲೆ

ನೋಂದಣಿ ಶುಲ್ಕ ಹೆಚ್ಚಳ ಖಂಡಿಸಿ ಧರಣಿ

ಸೌಮ್ಯ ಆರ್

ಕಾಸರಗೋಡು: ಕೇರಳದ ಎಡರಂಗ ಸರ್ಕಾರ ಟ್ರೇಡ್ ಯೂನಿಯನ್ ನೋಂದಣಿ ಶುಲ್ಕವನ್ನು ಹತ್ತುಪಟ್ಟು ಹೆಚ್ಚಿಸುವ ನಿರ್ಧಾರ ಕಾರ್ಮಿಕ ವಿರೋಧಿ ಹಾಗೂ ಜನಸಾಮಾನ್ಯರನ್ನು ದಮನಿಸುವ ತಂತ್ರವಾಗಿದೆ ಎಂದು ಬಿಎಂಎಸ್ ಕಾನೂನು ರಾಜ್ಯ ಸಮಿತಿ ಸದಸ್ಯ ವಿ.ವಿ.ಬಾಲಕೃಷ್ಣನ್ ಆರೋಪಿಸಿದ್ದಾರೆ.

ನೋಂದಣಿ ಶುಲ್ಕ ಹೆಚ್ಚಳ ಖಂಡಿಸಿ ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಕಾರ್ಮಿಕ ಕಲ್ಯಾಣ ಇಲಾಖೆ ಕಚೇರಿ ಎದುರು ಧರಣಿಯಲ್ಲಿ ಮಾತನಾಡಿದರು.

ಬಿಎಂಎಸ್ ಜತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಬಿಎಂಎಸ್ ಎಂಎಂಎಂ ಉಪಾಧ್ಯಕ್ಷ ಅನಿಲ್ ಬಿ.ನಾಯರ್, ಬಿಎಂಎಸ್ ಜಿಲ್ಲಾ ಪದಾಧಿಕಾರಿಗಳಾದ ಹರೀಶ್ ಕುದ್ರೆಪ್ಪಾಡಿ, ಯಶವಂತಿ ಬೆಜ್ಜ, ಬಾಬುಮೋನ್ ಚೆಂಗಳ, ಭಾಸ್ಕರನ್ ಪೊಯಿನಾಚಿ, ಶ್ರೀಧರನ್ ಚೆನಕೋಡ್, ಮನೀಶ್, ಗುರುದಾಸ್ ಮಧೂರ್ ಇದ್ದರು. ಕಾರ್ಮಿಕರಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.