ಆನೇಕಲ್​ ವೆಂಕಟೇಶ್ವರ ಚಿತ್ರಮಂದಿರದಿಂದ ಆನೇಕಲ್​ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಸುರೇಶ್​, ವೆಂಕಟೇಶ್​ ಗುರು, ಹೆಬ್ಬಾಳ ವೆಂಕಟೇಶ್​, ಡಿ.ವೆಂಕಟೇಶ್​, ಪಾಪಮ್ಮ, ಗೌರೀಶ್​, ರಾಮಸ್ವಾಮಿ, ಶ್ರೀರಾಮ್​, ನಾಗರಾಜ್​ ಮೌರ್ಯ, ರುದ್ರ, ಇಂಡ್ಲವಾಡಿ ಬಸವರಾಜು, ವಕೀಲ ಆನಂದ, ಗೋವಿಂದ್​, ಮೌರ್ಯ, ತ್ರಿಪುರ ಸುಂದರಿ ಇದ್ದರು. 
ಜಿಲ್ಲೆ

ಭ್ರಷ್ಟಾಚಾರ ವಿರೋಧಿಸಿ ಪ್ರತಿಭಟನೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್​ : ದಲಿತರ ಭೂಮಿ ಕಬಳಿಸಲು ನೆರವಾಗುತ್ತಿದ್ದಾರೆನ್ನಲಾದ ಉಪ ವಿಭಾಗಾಧಿಕಾರಿ ಅಪೂರ್ವ ಬಿದರಿ ವರ್ಗಾವಣೆ ಮಾಡಬೇಕು. ಇವರ ಅವಧಿಯಲ್ಲಿ ನಡೆದಿರಬಹುದಾದ ಎಲ್ಲ ಅಕ್ರಮಗಳನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿ ದಲಿತ ಮತ್ತು ಪ್ರಗತಿಪರ ಸಂಟನೆಗಳ ಒಕ್ಕೂಟದಿಂದ ಆನೇಕಲ್​ನಲ್ಲಿ ಬೃಹತ್​ ಪ್ರತಿಭಟನೆ ನಡೆಯಿತು.

ಮೂರು ಸಾವಿರಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದರು. ಪಟ್ಟಣದ ಶಿವಾಜಿ ಸರ್ಕಲ್​ನಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾಕಾರರು ೊರಕೆಗಳನ್ನು ಹಿಡಿದು ಮೆರವಣಿಗೆ ಮಾಡಿದರು. ಸುಮಾರು ನಾಲ್ಕು ಗಂಟೆಗಳ ಕಾಲ ತಾಲೂಕು ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿ, ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಪಟ್ಟು ಹಿಡಿದರು. ಪ್ರತಿಭಟನೆ ಕಿಡಿ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಡಿವೈಎಸ್​ಪಿ, ಇನ್​ಸ್ಪೆಕ್ಟರ್​ ನೇತೃತ್ವದ ಪೊಲೀಸರ ತಂಡ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಎರಡು ಬಸ್​ಗಳಲ್ಲಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.

ಜಾತಿ,ಆದಾಯ ಪ್ರಮಾಣ ಪತ್ರಕ್ಕೂ ಲಂಚ: ಆನೇಕಲ್​ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಧಿಕಾರಿಗಳು, ಪೊಲೀಸರು ಏನು ಹೇಳುತ್ತಾರೋ ಅದೇ ಕಾನೂನು ಎನ್ನುವಂತಾಗಿದೆ. ವಿದ್ಯಾರ್ಥಿಗಳಿಗೆ ಬೇಕಾಗಿರುವ ಆದಾಯ, ಜಾತಿ ಪ್ರಮಾಣ ಪತ್ರಕ್ಕೂ ಸಾವಿರಾರು ರೂಪಾಯಿ ಲಂಚ ಕೇಳುತ್ತಾರೆ ಎಂದು ಹೋರಾಟಗಾರ ವೆಂಕಟೇಶಮೂರ್ತಿ ಆಪಾದಿಸಿದರು. ಹಿರಿಯ ಹೋರಾಟಗಾರ ಸಿ.ರಾವಣ ಮಾತನಾಡಿ, ದಲಿತರ ಭೂಮಿಗಳ ಮೇಲೆ ಬಲಾಢ್ಯರ ಕಣ್ಣುಬಿದ್ದಿದ್ದು, ಲ್ಯಾಂಡ್​ ಡೆವಲಪರ್ಸ್​ ಜತೆ ಶಾಮಿಲಾಗಿ ಕೋಟಿಗಟ್ಟಲೆ ಲಂಚ ಪಡೆದು ದಲಿತರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.