ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿ- ಧಾರವಾಡ ಬಿಆರ್‌ಟಿಎಸ್ ಅವ್ಯವಸ್ಥೆಯ ವಿರುದ್ಧ ಧಾರವಾಡ ಧ್ವನಿ ಸಂಘಟನೆಯಿAದ ಜು. 15ರಂದು ಬೆಳಗ್ಗೆ 10.30ಕ್ಕೆ ನವಲೂರು ಸೇತುವೆಯಿಂದ ಜಿಲ್ಲಾಽಕಾರಿ ಕಚೇರಿವರೆಗೆ ಪಾದಯÁತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮÁತನಾಡಿದ ಅವರು, ಧಾರವಾಡದ ಜ್ಯುಬಿಲಿ ವೃತ್ತದಿಂದ ನವಲೂರುವರೆಗೆ ಹಾಗೂ ಹುಬ್ಬಳ್ಳಿಯ ಉಣಕಲ್ ಕೆರೆ¬ಂದ ಚನ್ನಮ್ಮ ವೃತ್ತದವರೆಗೆ ಮಿನಿ ವಾಹನಗಳಿಗೆ (ಕಾರು, ಬೈಕ್, ಆಟೋ ರಿಕ್ಷಾ ಇತರೆ) ಬಿಆರ್‌ಟಿಎಸ್ ಲೇನ್‌ನಲ್ಲಿ ಸಂಚರಿಸಲು ಅವಕಾಶ ನೀಡಬೇಕು. ಎನ್‌ಟಿಟಿಎ-ï, ಟೋಲ್‌ನಾಕಾ, ಕೆಎಂಎ-ï, ನವಲೂರು ಸೇತುವೆ ಹಾಗೂ ಸನಾ ಕಾಲೇಜು ಎದುರು ನೀರು ನಿಲ್ಲುವುದನ್ನು ತಪ್ಪಿಸಬೇಕು. ಧಾರವಾಡದ ಲಕ್ಷಿ÷್ಮÃ ಟಾಕೀಸ್ ಬಳಿ ಹಾಕಿರುವ ಬ್ಯಾರಿಕೇಡ್ ತೆಗೆದು, ತಹಸೀಲ್ದಾರ್ ಕಚೇರಿ ಕಡೆಯಿಂದ ಸಂಗಮ ಟಾಕೀಸ್ ಕಡೆ ವಾಹನ ಸಾಗಲು ಅನುಕೂಲ ಮÁಡಬೇಕು. ಧಾರವಾಡದ ಜೆಎಸ್‌ಎಸ್ ಕಾಲೇಜಿನ ಮುಂದಿರುವ ಅವೈಜ್ಞಾನಿಕ ಸಿಗ್ನಲ್ ವ್ಯವಸ್ಥೆಯನ್ನು ಸರಿಪಡಿಸಬೇಕು. ಯÁಲಕ್ಕಿ ಶೆಟ್ಟರ್ ಕಾಲನಿಯ ಎದುರಿನ ಬ್ಯಾರಿಕೇಡ್ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಮುಕ್ತ ಮÁಡಬೇಕು ಎಂದು ಆಗ್ರಹಿಸಲಾಗುವುದು ಎಂದರು.
ಬಿಆರ್‌ಟಿಎಸ್ ಲೇನ್‌ಗಳಲ್ಲಿ ಚಿಗರಿ ಬಸ್‌ಗಳ ಸಂಚಾರ ವಿರಳವಾಗಿರುತ್ತದೆ. ಆದರೆ, ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ವಾಹನಗಳ ಸಂಚಾರ ವಿಪರೀತವಾಗಿರುತ್ತದೆ. ವಾಹನಗಳ ದಟ್ಟಣೆ ಹೆಚ್ಚುತ್ತಿದ್ದು, ಅಪಘಾತಗಳ ಸಂಖ್ಯೆ ಏರಿಕೆಯಾಗುತ್ತಿದೆ. ಪರಿಣಿತರ ಸಲಹೆ ಪಡೆದು ಸಾರ್ವಜನಿಕರ ಸುರಕ್ಷಿತ ಪ್ರಯÁಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರುವುದು ಪಾದಯÁತ್ರೆಯ ಉದ್ದೇಶವಾಗಿದೆ ಎಂದರು.
ಇದು ಪಕ್ಷಾತೀತ ಹೋರಾಟವಾಗಿದ್ದು, ವಿವಿಧ ಪಕ್ಷಗಳ ಶಾಸಕರು, ಕಾರ್ಯಕರ್ತರು ಸೇರಿ ಸುಮಾರು 15 ಸಂಘಟನೆಗಳು ಬೆಂಬಲ ಸೂಚಿಸಿವೆ. ಈ ಹೋರಾಟಕ್ಕೆ ಸಂಘ- ಸಂಸ್ಥೆಗಳು ಬೆಂಬಲ ನೀಡಬೇಕು ಎಂದರು.