ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿ- ಧಾರವಾಡ ನಡುವಿನ ಬಿಆರ್‌ಟಿಎಸ್ ಯೋಜನೆಯ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಮಾ. ೬ರಂದು ಧಾರವಾಡ ಧ್ವನಿ ಸಂಘಟನೆ ನೇತೃತ್ವದಲ್ಲಿ ಸಾರ್ವಜನಿಕ ವಾಹನದೊಂದಿಗೆ ತೆರಳುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆ ಅಧ್ಯಕ್ಷ ಈಶ್ವರ ಶಿವಳ್ಳಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಆರ್‌ಟಿಎಸ್ ಅವೈಜ್ಞಾನಿಕತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಗರದ ಜ್ಯುಬಿಲಿ ವೃತ್ತದಿಂದ ಗಾಂಽನಗರದವರೆಗೆ ಮತ್ತು ಉಣಕಲ್‌ನಿಂದ ಹೊಸೂರ ಕ್ರಾಸ್‌ವರೆಗೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಂಬ0ಧ ಉಸ್ತುವಾರಿ ಸಚಿವರು, ಶಾಸಕರು, ಸಂಬ0ಧಪಟ್ಟ ಅಽಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಯಾರೂ ಸ್ಪಂದಿಸದಿರುವುದನ್ನು ಖಂಡಿಸಿ ಮಾ. 6ರಂದು ಬೆಳಗ್ಗೆ 10ಕ್ಕೆ ಜ್ಯುಬಿಲಿ ವೃತ್ತದಿಂದ ಗಾಂಽನಗರವರೆಗೆ ಮತ್ತು ಉಣಕಲ್‌ನಿಂದ ಹೊಸೂರ ಕ್ರಾಸ್‌ವರೆಗೆ ಸಾರ್ವಜನಿಕ ವಾಹನದೊಂದಿಗೆ ಬಿಆರ್‌ಟಿಎಸ್ ರಸ್ತೆಯಲ್ಲಿ ಸಂಚರಿಸಲಾಗುವುದು. ಇದಕ್ಕೂ ಪರಿಹಾರ ಸಿಗದಿದ್ದರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಮನೆ ಮತ್ತು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವೆಂಕಟೇಶ ರಾಯ್ಕರ, ವೆಂಕಟೇಶ ಸಗಬಾಲ, ಪ್ರಕಾಶ ಬೆಂಗೇರಿ, ಸಂತೋಷ ಪಟ್ಟಣಶೆಟ್ಟಿ ಇತರರಿದ್ದರು.