ರಾಯಚೂರು ಒಳ ಮೀಸಲಾತಿ ಜಾರಿಗೆ ಮತ್ತೊಂದು ಸಮೀಕ್ಷೆಗೆ ವಿರೋಽಸಿ ಮಾದಿಗ ಸಮಾಜದ ವತಿಯಿಂದ ಶುಕ್ರವಾರ ನಗರದ ಡಾ.ಆರ್.ಎಸ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಒಳ ಮೀಸಲಾತಿ ಜಾರಿಗೆ ವಿಳಂ ಭ ಮಾಡಲು ಮತ್ತೊಂದು ಸಮೀಕ್ಷೆಗೆ ಮುಂದಾಗಿದನ್ನು ವಿರೋಽಸಿದರು. ಆಯೋಗದ ರಚನೆ ನೆಪದಲ್ಲಿ ಮಾದಿಗ ಸಮಾಜಕ್ಕೆ ಸರ್ಕಾರ ವಂಚಿಸುತ್ತಿದ್ದನ್ನು ಖಂಡಿಸಿದರು.
ಸಮಾಜದ ೧೦೧ ಜಾತಿಗಳಿಗೆ ನ್ಯಾಯಕೊಟ್ಟಿರುವ ಮಾಧುಸ್ವಾಮಿ ವರದಿ ಜಾರಿಯಾಗಲು ಒತ್ತಾಯಿಸಿದರು. ಈ ವೇಳೆ ಸಮಾಜದ ಮುಖಂಡ ಎಂ.ವಿರುಪಾಕ್ಷಿ ಮಾತನಾಡಿ, ಒಳ ಮೀಸಲಾತಿ ಜಾರಿಗೆ ವಿಳಂಭ ಮಾಡಲು ಆದಿ ಕರ್ನಾಟಕ, ಅದಿ ದ್ರಾವೀಡ ಜಾತಿಗಳಲ್ಲಿ ಗೊಂದಲವಿರುವುದ ರಿಂದ ಮತ್ತೊಂದು ಸಮೀಕ್ಷೆಗೆ ಸರ್ಕಾರದ ಶಿ-Áರಸು ಮಾಡಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ಆದೇಶ ನೀಡಿ ೭ ತಿಂಗಳ ಗತಿಸಿದರೂ ಸರ್ಕಾರ ಒಳ ಮೀಸಲಾತಿಗೆ ಜಾರಿಗೆ ಮುಂದಾಗದೇ ನಿರ್ಲಕ್ಷ÷್ಯ ವಹಿಸುತ್ತಿದೆ, ಹರಿಯಾಣ ಸರ್ಕಾರ ಈಗಾಗಲೇ ಜಾರಿಮಾಡದಿದೆ, ಆಂದ್ರ ತೆಲಂಗಾಣ ರಾಜ್ಯದಲ್ಲಿ ಜಾರಿಗೆ ಆದೇಶ ಮಾಡಿದೆ, ಆದರೆ ಕಾಂಗ್ರೆಸ್ ಸರ್ಕಾರದ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆನೆಪ ಹುಡುಕುತ್ತಾ ವಿಳಂಬ ಮಾಡುತ್ತಿದೆ ಎಂದು ದೂರಿದರು.
ಒಳ ಮೀಸಲಾತಿ ಜಾರಿಗೆ ಆಯೋಗ ಮಾಡಲು ೩ ತಿಂಗಳ ಸಮಯ ವ್ಯರ್ಥ ಮಾಡಿತ್ತು, ಅಧ್ಯಕ್ಷರ ನೇಮಕ್ಕೆ ೨ ತಿಂಗಳು ವಿಳಂಬ, ಇದೀಗ ಮತ್ತೊಂದು ಸಮೀಕ್ಷೆಗೆ ಮುಂದಾಗಿದ್ದು, ಒಳ ಮೀಸಲಾತಿ ಜಾರಿಗೆ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ ಎಂದರು. ಒಳ ಮೀಸಲಾತಿ ಜಾರಿಗೆ ಆಯೋಗ ರಚನೆ ಬೇಡಿಕೆಯಲ್ಲ, ಒಳ ಮೀಸಲಾತಿ ಜಾರಿಗೆ ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ರವಿಂದ್ರ ಜಲ್ದಾರ್, ರಾಜು ಎಸ್, ಭೀಮಣ್ಣ ಮಂಚಾಲಿ, ಮೌನೇಶ, ಸುಭಾಷ, ರಾಘವೇಂದ್ರ, ಭೀಮಯ್ಯ ಸೇರಿದಂತೆ ಅನೇಕರು ಇದ್ದರು.