ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಕೊಲೆ ಖಂಡಿಸಿ ಇಳಕಲ್ಲದಲ್ಲಿ ತಾಲೂಕು ಗಂಗಾಮತ ಅಂಬಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನೆಸಿ ನಡೆಸಿ ತಹಸೀಲ್ದಾರ್ ಎಸ್.ಬಿ. ಕೂಡಲಗಿ ಅವರಿಗೆ ಮನವಿ ಸಲ್ಲಿಸಲಾಯಿತು. 
ಜಿಲ್ಲೆ

ಅಂಜಲಿ ಕೊಲೆ ಖಂಡಿಸಿ ಪ್ರತಿಭಟನೆ

Vijayapura - Desk - Gurappa Lokuri

ಇಳಕಲ್ಲ: ಹುಬ್ಬಳ್ಳಿ ನಗರದ ವೀರಾಪುರ ಓಣಿಯಲ್ಲಿ ಬಡ ಕುಟುಂಬಕ್ಕೆ ಸೇರಿದ ಅಂಜಲಿ ಅಂಬಿಗೇರ ಕೊಲೆ ವಿರೋಧಿಸಿ ಇಳಕಲ್ಲ ತಾಲೂಕಿನ ಗಂಗಾಮತ ಅಂಬಿಗೇರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ದುಷ್ಕರ್ಮಿಗಳಿಗೆ ತಕ್ಷಣ ವಿಚಾರ ನಡೆಸಿ ಸ್ಥಳದಲ್ಲೇ ಎನ್‌ಕೌಂಟರ್ ಮಾಡುವ ಕಾನೂನು ರಚಿಸಿ ಜಾರಿಗೆ ತರಬೇಕು. ಮೃತ ಯುವತಿ ಕುಟುಂಬಕ್ಕೆ ಮುಖ್ಯಮಂತ್ರಿಗಳ ನಿಧಿಯಿಂದ ಪರಿಹಾರ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗದ್ದಯ್ಯ ತಪ್ಪಲದಡ್ಡಿ, ಬಸವರಾಜ ಜುಮಲಾಪುರ, ಯಮನೂರ ಹಂಚನಾಳ, ಪ್ರವೀಣ ಗೋರಕಲ್ಲ, ಮುತ್ತಪ್ಪ ಬೂದಿನನಿ, ಪುಲಕೇಶಿ ಸಾಯಿಕುಮಾರ ತಪ್ಪಲದಡ್ಡಿ ಇತರರಿದ್ದರು.