ಪುತ್ತೂರು: ಸಿಐಟಿಯು ನೇತೃತ್ವದಲ್ಲಿ ಪುತ್ತೂರು, ಬೆಳ್ತಂಗಡಿ ಕಡಬ ತಾಲೂಕು ಅಕ್ಷರ ದಾಸೋಹ ನೌಕರರ ಸಂಘದಿಂದ ಅಕ್ಷರ ದಾಸೋಹ ನೌಕರರ ವೇತನ ಮಾಸಿಕ ರೂ.೨೬ ಸಾವಿರ ನೀಡಬೇಕು, ನಿವೃತ್ತಿಯಾದವರ ಇಡುಗಂಟು ತಕ್ಷಣ ಬಿಡುಗಡೆಗೊಳಿಸಬೇಕು, ನಿವೃತ್ತಿಯಾದ ಬಿಸಿಯೂಟ ನೌಕರರಿಗೆ ಮಾಸಿಕ ರೂ.೧೦ ಸಾವಿರ ಪಿಂಚಣಿ ನೀಡಿ, ಅಕ್ಷರದಾಸೋಹ ನೌಕರರನ್ನು ಸರ್ಕಾರಿ ಡಿ ಗ್ರೂಪ್ ನೌಕರರೆಂದು ಮಾನ್ಯ ಮಾಡಬೇಕು, ೧೨ ತಿಂಗಳೂ ಸಂಬಳ ನೀಡಬೇಕು, ಮಕ್ಕಳ ಹಾಜರಾತಿ ಆಧಾರದಲ್ಲಿ ಕೈ ಬಿಡಬೇಡಿ ಸಹಿತ ೩೧ ಬೇಡಿಕೆಗಳನ್ನು ಆಗ್ರಹಿಸಿ ಪುತ್ತೂರು ತಾಲೂಕು ಆಡಳಿತ ಸೌಧದ ಬಳಿಯ ಅಮರ್‌ಜವಾನ್ ಸ್ಮಾರಕ ಜ್ಯೋತಿ ಬಳಿ ಉಪವಿಭಾಗ ಮಟ್ಟದ ಪ್ರತಿಭಟನೆ ನಡೆಯಿತು.
ಸಿಐಟಿಯು ಮುಖಂಡ ಬಿ.ಎಂ.ಭಟ್ ಮಾತನಾಡಿ, ಕೆಲವು ಶಾಸಕರು ಕೊಲ್ಲುವ ಸಂಸ್ಕೃತಿಯವರಾಗಿದ್ದು, ವಿಧಾನ ಸೌಧದಲ್ಲಿ ಕೊಲ್ಲುವುದನ್ನು ಮಾತನಾಡುತ್ತಾರೆ. ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಬಿಸಿಯೂಟದವರಿಗೆ ರೂ.೬ ಸಾವಿರದ ಗ್ಯಾರಂಟಿ ಕೊಟ್ಟಿತ್ತು. ಆದರೆ ಅದು ಇಲ್ಲಿನ ತನಕ ಬಂದಿಲ್ಲ. ಕೇಂದ್ರ ಸರಕಾರ ಒಮ್ಮೆಯೂ ನಯಾ ಪೈಸೆ ಏರಿಕೆ ಮಾಡಿಲ್ಲ. ಜನಪ್ರತಿನಿಽಗಳು ಬಿಸಿಯೂಟದ ನೌಕರರ ಬಗ್ಗೆ ವಿಧಾನಸೌಧದಲ್ಲಿ ಮಾತನಾಡುತ್ತಿಲ್ಲಎಂದರು.
ಸಿಐಟಿಯು ತಾಲೂಕು ಕಾರ್ಯದರ್ಶಿ ಪಿ.ಕೆ ಸತೀಶನ್,ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷೆ ಲತಾ ಏಕತ್ತಡ್ಕ, ಕಾರ್ಯದರ್ಶಿ ರಂಜಿತಾ, ಸಂಘಟಕಿ ಲೀಲಾವತಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷೆ ಲೋನ್ಸಿ, ಕಡಬದ ಅಧ್ಯಕ್ಷೆ ರೇವತಿ, ಸುಲೋಚನಾ, ಹೇಮಾವತಿ ಭಾಗವಹಿಸಿದ್ದರು.