ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕು ಕನ್ನಮಂಗಲ ಗ್ರಾಪಂ ಪಿಡಿಒ ಅಮಾನತಿಗೆ ಒತ್ತಾಯಿಸಿ ಗ್ರಾಪಂ ಸದಸ್ಯ ಸೋಮಶೇಖರ್ ಹಾಗೂ ಬೆಂಬಲಿಗರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.
ಯಾರದೋ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಮತ್ಯಾರಿಗೋ ಖಾತಾ ಮಾಡಿಕೊಟ್ಟಿದ್ದಾರೆ, 2021ರ ಆಗಸ್ಟ್ 21ರಂದು ಹಿಂದಿನ ಪಿಡಿಒ ಮಹಜರ್ ಮಾಡಿ, ಇಒಗಳಿಗೆ ವರದಿ ಸಲ್ಲಿಸಿರುತ್ತಾರೆ, ವರದಿಯಲ್ಲಿ ವಿಸ್ತೀರ್ಣ 7 ಜನರಿಗೆ ಸೇರಿರುತ್ತದೆ. ಖಾತೆದಾರರಿಗೆ 803.41 ಚದರ ಮೀಟರ್ ಒಳಗೊಂಡಿರುತ್ತದೆ. ಆದರೆ ಈಗಿನ ಪಿಡಿಒ ಇದರಲ್ಲಿ ಅಕ್ರಮ ಖಾತೆ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಗ್ರಾಪಂ ಸದಸ್ಯ ಒತ್ತಾಯಿಸಿದರು.