ಜಿಲ್ಲೆ

ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹ

Mangaluru - Nishantha Narayana

ಪುತ್ತೂರು: ನಗರಸಭಾ ಸದಸ್ಯನ ಪುತ್ರನ ಅತ್ಯಾಚಾರ ಪ್ರಕರಣ ಖಂಡಿಸಿ ಹಾಗೂ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಎಸ್‌ಡಿಪಿಐಯಿಂದ ನಗರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಎಸ್‌ಡಿಪಿಐ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮೂನಿಶ್ ಅಲಿ ಬಂಟ್ವಾಳ ಮಾತನಾಡಿ ಓರ್ವ ತಾಯಿಗೆ ನ್ಯಾಯ ಕೊಡಲು ಆಗದ ಹಿಂದು ಸಮಾಜದ ಮುಖಂಡರ ಅಸಲಿಯತ್ತು ಈಗ ಗೊತ್ತಾಗಿದೆ. ಕೃತ್ಯ ಎಸಗಿದ ಮನೆಯ ಪರಿಶೀಲನೆ ನಡೆಸದ ಪೊಲೀಸರು ಆರೋಪಿಯನ್ನು ಯಾಕೆ ಬಂಽಸಿಲ್ಲ ಎಂದು ಪ್ರಶ್ನಿಸಿದರು.

ಸಂತ್ರಸ್ತೆಯ ತಾಯಿ ನಮಿತಾ, ಎಸ್‌ಡಿಪಿಐ ಜಿಲ್ಲಾ ಸದಸ್ಯೆ ಜೀನತ್ ಬಂಟ್ವಾಳ, ತಾಜುದ್ದೀನ್ ಸಾಲ್ಮರ, ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ರ- ಬಾವು, ನಗರಸಭೆ ಸದಸ್ಯೆ -ತಿಮತ್ ಝೋರಾ, ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು. ಉಸ್ಮಾನ್ ಎ.ಕೆ. ಕಾರ್ಯಕ್ರಮ ನಿರೂಪಿಸಿದರು.