ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕಾಸರಗೋಡು ನಗರದಿಂದ ಚಂದ್ರಗಿರಿ ಹಾದಿಯಾಗಿ ಕಾಞಂಗಾಡು ಸಂಚರಿಸುವ ಕೆಎಸ್‌ಟಿಪಿ ರಸ್ತೆ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಬಿಜೆಪಿ ಉದುಮ ಮಂಡಲ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್.ಅಶ್ವಿನಿ ಮಾತನಾಡಿ, ಕಾಞಂಗಾಡು ಕೆಎಸ್‌ಟಿಪಿ ರಸ್ತೆಯ ಶೋಚನೀಯಾವಸ್ಥೆ ರಾಜ್ಯ ಸರ್ಕಾರದ ಅಧೋಗತಿಗೆ ಸಾಕ್ಷಿಯಾಗಿದೆ. ಸಾಧನೆಗಳ ಬಗ್ಗೆ ಮಾತುಗಳನ್ನಾಡುತ್ತಿರುವ ಲೋಕೋಪಯೋಗಿ, ಪ್ರವಾಸೋದ್ಯಮ ಖಾತೆ ಸಚಿವ ಪಿ.ಎ.ಮುಹಮ್ಮದ್ ರಿಯಾಸ್ ಕಾಞಂಗಾಡು ಕೆಎಸ್‌ಟಿಪಿ ರಸ್ತೆಯಲ್ಲಿ ರೋಡ್ ಶೋ ನಡೆಸಿ ಸೆಲ್ಫಿ ತೆಗೆದುಕೊಳ್ಳುವಂತೆ ಸವಾಲು ಹಾಕಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್, ಉದುಮ ಮಂಡಲ ಸಮಿತಿ ಉಪಾಧ್ಯಕ್ಷ ತಂಬಾನ್ ಆಚೇರಿ, ಪ್ರಮುಖರಾದ ಸದಾಶಿವನ್ ಮಣಿಯಂಗಾನಂ, ನಾರಾಯಣನ್ ವಡಕ್ಕಿಣಿಯೆ, ಉದುಮ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೂಟಕಣಿ, ಎ.ಎಂ.ಮುರಳೀಧರನ್, ಸೌಮ್ಯ ಪದ್ಮನಾಭನ್, ರತೀಶ್, ವಿ.ಎ.ವಿನಿಲ್ ಕುಮಾರ್, ಮುರಳಿ ಅಚೇರಿ, ಓಂ ಪ್ರಸಾದ್ ಮೊದಲಾದವರು ಇದ್ದರು.