ಹಾವೇರಿ: ಬೆಂಗಳೂರಿನಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಆಯೋಜಿಸಿದ್ದ ಹೋರಾಟದ ಸಭೆಯಲ್ಲಿ ಅಮೂಲ್ಯ ಎಂಬ ಯುವತಿ ನೀಡಿರುವ ದೇಶದ್ರೋಹದ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ಕಾರ್ಯಕರ್ತರು ನಗರದ ಕಾಗಿನಲೆ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ದೇಶದ್ರೋಹ ಹೇಳಿಕೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಇಂತಹವರನ್ನು ಶಿಕ್ಷಿಸಲು ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಬೇಕು. ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಂತೋಷಿಮಾತಾ ಬಡಿಗೇರ, ಜಿಲ್ಲಾ ಕಾರ್ಯಾಧ್ಯಕ್ಷ ನೂರಅಹ್ಮದ ಲಕ್ಷೆ್ಮೕಶ್ವರ, ಪ್ರಧಾನ ಕಾರ್ಯದರ್ಶಿ ಮಾರುತಿ ಹಾಲಗಿ, ಸಂಘಟನಾ ಕಾರ್ಯದರ್ಶಿ, ಮಹದೇವಪ್ಪ ಹೆಡಿಗ್ಗೊಂಡ, ಮುಖಂಡರಾದ ನಿಂಗರಾಜ ಕರಡೆಮ್ಮನವರ, ಪರಮೇಶ ತೋಟದ, ಫಕ್ಕೀರೇಶ ಕಟ್ಟಿಮನಿ, ಪುಟ್ಟಪ್ಪ ಹಿತ್ತಲಮನಿ, ಕೊಟ್ರೇಶ ನೆಲೋಗಲ್ಲ, ವಸಂತಗೌಡ ಪಾಟೀಲ, ಹನಮಂತ ಗೋವಿ, ಬಸವರಾಜ ಬಡಗಡ್ಡಿ, ನಾಗರಾಜ ಮುಳಥಳ್ಳಿ, ಹೊನ್ನಪ್ಪ ಲಿಂಗದಹಳ್ಳಿ ಇತರರಿದ್ದರು.