ಬಳ್ಳಾರಿಯ ನಂದಿ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಅರಿವು ಕಾರ್ಯಕ್ರಮದಲ್ಲಿ ರಾಬಕೊವಿ ವ್ಯವಸ್ಥಾಪಕ ನಿರ್ದೇಶಕ ಆರ್.ಪ್ರಭುಶಂಕರ ಮಾತನಾಡಿದರು. ಪ್ರಾಚಾರ್ಯ ಕಕ್ಷನ್ ಜಬೀನ್, ನಿರ್ದೇಶಕ ಕೆ.ಉಮೇರ ಅಹಮ್ಮದ್, ಸಂಯೋಜಕ ಮುನೀರ್ ಶೇಕ್, ವ್ಯವಸ್ಥಾಪಕ ಸಿದ್ದರಾಮಪ್ಪ ಶಿವರಾಯ ಕಣ್ಣೂರ ಇತರರಿದ್ದರು. 
ಜಿಲ್ಲೆ

ಹಾಲಿನಲ್ಲಿರುವ ಪ್ರೋಟಿನ್‌ಗಳು ಆರೋಗ್ಯಕ್ಕೆ ಪೂರಕ

ಬಳ್ಳಾರಿ: ಹಾಲಿನಲ್ಲಿರುವ ಕ್ಯಾಲ್ಸಿಯಂ, ಪ್ರೋಟಿನ್, ವಿಟಮಿನ್-ಬಿ2 ಸೇರಿ ವಿವಿಧ ಪೋಷಕಾಂಶಗಳು ಆರೋಗ್ಯಕ್ಕೆ ಪೂರಕವಾಗಿದೆ ಎಂದು ರಾಬಕೊವಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಪ್ರಭುಶಂಕರ ಹೇಳಿದರು.

ನಗರದ ನಂದಿ ಶಾಲೆಯ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಸಮತೋಲನ ಆರೋಗ್ಯದ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿವೆ ಎಂದರು.

ರಾಬಕೊವಿ ಹಾಲು ಒಕ್ಕೂಟದ ವ್ಯವಸ್ಥಾಪಕ (ಮಾ) ಮೋಹನ್ ಎಲ್.ಶಿಂಧೆ ಮಾತನಾಡಿ, ಡೇರಿ ಉದ್ಯಮಕ್ಕೆ ಸಂಬಂಧಿಸಿದ ಉಪಕ್ರಮಗಳ ಕುರಿತು ತಿಳಿಯಲು ಒಕ್ಕೂಟದಿಂದ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಅರಿವು ಕಾರ್ಯಕ್ರಮ ಕುರಿತು ನಡೆಸಿದ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.