ಕಾರವಾರ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅನಽಕೃತವಾಗಿ ಹಣ ಪಡೆಯುತ್ತಿದ್ದ ಆರೋಪದ ಮೇಲೆ ಬೆಂಗಳೂರಿನ ವಲಸಿಗರ ರಕ್ಷಣಾ ಇಲಾಖೆ (ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್) ಅಽಕಾರಿಗಳು ಹೊನ್ನಾವರದ ಕಚೇರಿಯೊಂದರ ಮೇಲೆ ದಾಳಿ ನಡೆಸಿದ್ದಾರೆ.
ಹೊನ್ನಾವರ ಶರಾವತಿ ಸರ್ಕಲ್‌ನಲ್ಲಿ ಕಚೇರಿ ಹೊಂದಿರುವ ಟ್ರಾವೆಲ್ ಟಚ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಕಚೇರಿಯ ಮೇಲೆ ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್(ಪಿಒಇ) ಇಲಾಖೆಯ ಬೆಂಗಳೂರಿನ ಅಧಿಕಾರಿ ಅವನೀಶ ಶುಕ್ಲಾ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಅಲ್ಲಿ ಸಾಕಷ್ಟು ದಾಖಲೆಗಳನ್ನು ಕಲೆ ಹಾಕಿದ್ದು, ಅದರ ಆಧಾರದ ಮೇಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಟ್ರಾವೆಲ್ಸ್ ಮಾಲೀಕನ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.
ಟ್ರಾವೆಲ್ಸ್ ಮಾಲೀಕರ ಬಳಿ ವಿದೇಶಿ ವ್ಯವಹಾರಗಳ ಇಲಾಖೆ ನೀಡುವ ಯಾವುದೇ ಅನುಮತಿ ಪತ್ರ ಇರಲಿಲ್ಲ. ಆದರೂ ಹೊನ್ನಾವರ, ಭಟ್ಕಳ ಹಾಗೂ ಸುತ್ತಮುತ್ತಲ ಭಾಗದ ಜನರಿಂದ ಲಕ್ಷಾಂತರ ರೂ. ಹಣ ಪಡೆದು, ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ಎನ್ನಲಾಗಿದೆ. ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸುವ ಕಂಪನಿಗಳಿದ್ದರೆ ಅದಕ್ಕೆ ಹಣ ಕೊಟ್ಟು ಮೋಸ ಹೋಗದೇ ಅಂಥವರ ವಿರುದ್ಧ ತಮಗೆ ಮಾಹಿತಿ ನೀಡುವಂತೆ ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್ ತಿಳಿಸಿದೆ.