ಜಿಲ್ಲೆ

ವೈದ್ಯರಿಗೆ ಸೂಕ್ತ ರಕ್ಷಣೆ ನೀಡಲಿ

ಸಿಂಧನೂರು: ರಾಯಚೂರಿನ ವೈದ್ಯ ಜಯಪ್ರಕಾಶ ಪಾಟೀಲ್ ಬೆಟ್ಟದೂರು ಕಾರಿನ ಮೇಲೆ ಗುಂಡಿನ ದಾಳಿ ನಡೆದಿರುವುದನ್ನು ಖಂಡಿಸಿ ತಹಸಿಲ್ ಕಚೇರಿ ಶಿರಸ್ತೇದಾರ್ ಉಮೇಶ ರಾಥೋಡ್‌ಗೆ ಅಖಿಲ ಕರ್ನಾಟಕ ಲಾಳಗೊಂಡ ಸಮಾಜದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.

ಸಾತ್ ಮೈಲ್ ಕ್ರಾಸ್ ಹತ್ತಿರ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್ ಗುಂಡುಗಳು ಕಾರಿಗೆ ತಗುಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈದ್ಯರ ಮೇಲೆ ಹಾಡ ಹಗಲೇ ಗುಂಡಿನ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಮುಂದಿನ ದಿನಗಳಲ್ಲಿ ಇಂಥ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಬೇಕು.

ಪ್ರಮುಖರಾದ ಮಲ್ಲಿಕಾರ್ಜುನ ವಲ್ಕಂದಿನ್ನಿ, ಬಸವರಾಜ ಅಲಬನೂರು ಇಂಜಿನಿಯರ್, ಬಸವರಾಜ ಡಿ.ಸಿ.ಅಲಬನೂರು, ರಾಮನಗೌಡ ಮಲ್ಕಾಪುರ, ದೇವೇಂದ್ರಗೌಡ ಹೊಸಳ್ಳಿ, ಮಲ್ಲಿಕಾರ್ಜನ ವಲ್ಕಂದಿನ್ನಿ, ಶಿವಬಸಪ್ಪ, ಚಿದಾನಂದಪ್ಪ, ಕರಿಲಿಂಗಪ್ಪ ತುರ್ವಿಹಾಳ ಇದ್ದರು.