ಗುಂಡ್ಲುಪೇಟೆ: ಕಸಾಯಿಖಾನೆ ಹೋಗುತ್ತಿದ್ದ ಐದು ಜಾನುವಾರುಗಳನ್ನು ಹಿಂದು ಸಂಘಟನೆಯ ಕಾರ್ಯಕರ್ತರು ರಕ್ಷಣೆ ಮಾಡಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಶುಕ್ರವಾರ ಟೆಂಪೋದಲ್ಲಿ ಮೈಸೂರಿನಿಂದ ತೆರಕಣಾಂಬಿ ಮಾರ್ಗವಾಗಿ ತಾಳವಾಡಿಯ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದರು. ಈ ವೇಳೆ ಚಾಲಕ ವಾಹನ ನಿಲ್ಲಿಸಿ ಪರಾರಿಯಾಗಿದ್ದಾನೆ.
ಜಾನುವಾರು ಸಾಗಣೆ ಮಾಡುತ್ತಿದ್ದ ಮಹಮದ್ ರಫಿ ಹಾಗೂ ಐದು ಜಾನುವಾರುಗಳನ್ನು ಬೇಗೂರು ಪೊಲೀಸರ ವಶಕ್ಕೆ ಒಪ್ಪಿಸಿದರು. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಜಾನುವಾರುಗಳನ್ನು ಪಿಂಜರಾಪೋಲಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.