ಮಳವಳ್ಳಿ ತಾಲೂಕಿನ ಕಗ್ಗಳ ಗ್ರಾಮದ ಸಮೀಪದ ಜಮೀನೊಂದರಲ್ಲಿ ಪತ್ತೆಯಾದ ಮೊಸಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದು ಕಾವೇರಿ ನದಿಗೆ ಬಿಡಲಾಯಿತು.  
ಜಿಲ್ಲೆ

ಜಮೀನಿನಲ್ಲಿ ಕಾಣಿಸಿಕೊಂಡ ಮೊಸಳೆ ರಕ್ಷಣೆ

ಮಳವಳ್ಳಿ: ತಾಲೂಕಿನ ಕಗ್ಗಳ ಗ್ರಾಮದ ಜಮೀನಿನಲ್ಲಿ ಭಾನುವಾರ ಕಾಣಿಸಿಕೊಂಡ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ಸುರಕ್ಷಿತವಾಗಿ ನದಿಗೆ ಬಿಟ್ಟಿದ್ದಾರೆ.

ಗ್ರಾಮ ಸಮೀಪದ ಕೆರೆ ಬಳಿ ಇರುವ ಕೃಷ್ಣರಾಜೇ ಅರಸು ಎಂಬುವರ ಜಮೀನಿನ ಪೊದೆಯಲ್ಲಿದ್ದ ಮೊಸಳೆಯನ್ನು ಕುರಿಗಾಹಿಗಳು ನೋಡಿದ್ದಾರೆ. ಕೂಡಲೇ ಗ್ರಾಮಸ್ಥರಿಗೆ ವಿಷಯ ತಿಳಿಸಿದ ನಂತರ ಮುಖಂಡರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ದೌಡಾಯಿಸಿದ ಉಪ ವಲಯ ಅರಣ್ಯಾಧಿಕಾರಿ ಮಹದೇವು ಹಾಗೂ ಸಿಬ್ಬಂದಿ ಗ್ರಾಮಸ್ಥರ ಸಹಾಯದಿಂದ ಮೊಸಳೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದು ಸಮೀಪದ ಕಾವೇರಿ ನದಿಗೆ ಬಿಡಲು ಟ್ರಾೃಕ್ಟರ್‌ನಲ್ಲಿ ಕೊಂಡೊಯ್ದರು.