ಕ್ಷಾತ್ರ ಸಂಗಮ-3 ಎಂಬ ರಾಮಕ್ಷತ್ರಿಯರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ರಾಮಕ್ಷತ್ರಿಯ ಸೇವಾ ಸಂಘ ಮಂಗಳೂರು ವತಿಯಿಂದ ಮೈಸೂರು ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಗೌರವಿಸಲಾಯಿತು. 
ಜಿಲ್ಲೆ

ಧರ್ಮ ಸಂಸ್ಕೃತಿಯ ರಕ್ಷಣೆ ರಾಮಕ್ಷತ್ರಿಯರ ಮೂಲ ಉದ್ದೇಶ

ಮಂಗಳೂರು: ತಲತಲಾಂತರದಿಂದ ದೇಶ, ಧರ್ಮ, ಪರಂಪರೆ ಹಾಗೂ ಸಂಸ್ಕೃತಿಯ ರಕ್ಷಣೆಯ ಉದ್ದೇಶದಿಂದಲೇ ಬೆಳೆದಿರುವ ರಾಮಕ್ಷತ್ರಿಯ ಸಮುದಾಯ ರಾಜಾಡಳಿತದ ಬಳಿಕ ದೇಶಾಂತರ ಚದುರಿ ಹೋಗಿದೆ. ಆದರೆ ರಾಮಕ್ಷತ್ರಿಯರ ಮೂಲ ಉದ್ದೇಶ ಬದಲಾಗಬಾರದು ಎಂದು ಸಂಸದ ಹಾಗೂ ಮೈಸೂರು ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ರಾಮಕ್ಷತ್ರಿಯ ಸೇವಾ ಸಂಘ ಮಂಗಳೂರು ಇದರ ನೇತೃತ್ವದಲ್ಲಿ ಮೋರ್ಗನ್ಸ್ ಗೇಟ್‌ನಲ್ಲಿರುವ ಪಾಲೆಮಾರ್ ಗಾರ್ಡನ್ ನಲ್ಲಿ ಕ್ಷಾತ್ರ ಸಂಗಮ-3 ಎಂಬ ರಾಮಕ್ಷತ್ರಿಯರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಧಾರ್ಮಿಕ ಪರಪಂರೆಯಲ್ಲಿ ರಾಮಕ್ಷತ್ರಿಯರಿಗೆ ವಿಶೇಷ ಸ್ಥಾನಮಾನವಿದ್ದು, ಶತಶತಮಾನಗಳಿಂದಲೂ ರಾಮಕ್ಷತ್ರಿಯರು ಕರಾವಳಿಯ ಸಂಸ್ಕೃತಿ ಪರಂಪರೆಯ ಉಳಿವಿಗಾಗಿ ಹೋರಾಟ ನಡೆಸಿದ ಬಗ್ಗೆ ಹೆಮ್ಮೆ ಇದೆ. ರಾಮಕ್ಷತ್ರಿಯರ ಜನ್ಮದುದ್ದೇಶವೇ ಧರ್ಮ ರಕ್ಷಣೆಯಾಗಿದ್ದು, ಕಾಲಾನಂತರ ಈ ಜವಾಬ್ದಾರಿ ಭಾರತದ ಸಂವಿದಾನಕ್ಕೆ ವಹಿಸಲಾಗಿದೆ. ಆದರೆ ನಮ್ಮ ಕ್ಷಾತ್ರಧರ್ಮದ ಉದ್ದೇಶ ನಶಿಸಿ ಹೋಗಬಾರದು. ಕೇವಲ ಯುದ್ದ ಬಲದಿಂದ ಧರ್ಮ, ಸಂಸ್ಕೃತಿ, ದೇಶ ರಕ್ಷಣೆ ಸಾಧ್ಯವಿಲ್ಲ, ಜಾಗೃತಿಯಿಂದಲೂ ಸಾಧ್ಯವಿದೆ. ಸಂಘಟನೆ, ದೇಶಾಭಿಮಾನ, ಜಾಗೃತಿ, ತ್ಯಾಗ ಮನೋಭಾವನೆಯಿಂದ ರಾಮಕ್ಷತ್ರಿರು ಮತ್ತಷ್ಟು ಗಟ್ಟಿಗೊಳ್ಳಬೇಕಾಗಿದೆ.ರಾಮಕ್ಷತ್ರಿಯ ಸಮುದಾಯವು 5 ಬೆರಳಿನ ಒಂದು ಮುಷ್ಟಿಯಂತೆ ಗಟ್ಟಿಯಾಗಿ ಬೆಳೆದು ಇತರರಿಗೆ ಮಾಧರಿಯಾಗಬೇಕು ಎಂದರು.

ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ಮೈಸೂರಿನ ಓಡೆಯರ್ ಶಾಶ್ವತವಾಗಿ ರಾಜಗಾಗಿದ್ದೀರಿ. ಈ ಮೂಲಕ ರಾಮಕ್ಷತ್ರಿಯ ಸಮಾಜಕ್ಕೂ ಮೂಲ ಪ್ರೇರಣೆಯಾಗಿದ್ದಾರೆ. ಕರಾವಳಿಯಲ್ಲಿ ರಾಮಕ್ಷತ್ರಿಯ ಸಮುದಾಯ ತನ್ನದೇ ಆದ ಸ್ಥಾನಮಾನ ಹೊಂದಿದ್ದು, ಈ ಸಮುದಾಯಕ್ಕೆ ಶಕ್ತಿಯಾಗಿ ಕೃಷ್ಣ ಜೆ ಪಾಲೆಮಾರ್ ಕೆಲಸ ಮಾಡುತ್ತಿದ್ದಾರೆ. ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಪಾಲೇಮಾರ್ ಕೊಡುಗೆ ಅಪಾರವಾಗಿದೆ. ಕೃಷ್ಣ ಜೆ ಪಾಲೆಮಾರ್ ನನ್ನ ರಾಜಕೀಯ ಗುರುವಾಗಿ ಅವರ ಜೊತೆಯಲ್ಲಿ ವೇದಿಕೆ ಹಂಚಿಕೊಳ್ಳವುದೇ ಸಂತಸ ಎಂದರು.

ಪ್ರಧಾನ ಸಲಹೆಗಾರ ಹಾಗೂ ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಯೋಧ ಐಎನ್ ರೈ, ಪ್ರಮುಖರಾದ ಶಶಿಧರ್, ದೇವರಾಯ ಶೇರಿಗಾರ್, ಎಸಿಎಫ್ ಶ್ರೀಧರ್, ಕಿಶೋರ್ ಕುಮಾರ್, ಜೆ.ಕೆ.ರಾವ್. ನಾಗರಾಜ್, ದೀಪಕ್ ಕೆ.ಆರ್, ಎಸಿಪಿ ಶ್ರೀಕಾಂತ್, ಶ್ರವಣ್ ಗಂಗೊಳ್ಳಿ, ರವೀಂದ್ರ ರಾವ್, ಮುರಳಿಧರ್ ,ರವೀಂದ್ರ ಕೆ, ಕೃಷ್ಣ ಮುರಳಿ ಸಹಿತ ಹಲವರು ಇದ್ದರು.

ರಾಮಕ್ಷತ್ರಿಯ ಸೇವಾ ಸಂಘ ಮಂಗಳೂರು ವತಿಯಿಂದ ಮೈಸೂರು ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಗೌರವಿಸಲಾಯಿತು. ನೇಹಾ ಆರ್ ಪ್ರಾರ್ಥಿಸಿದರು, ರಾಮಕ್ಷತ್ರಿಯ ಸೇವಾ ಸಂಘ ಅಧ್ಯಕ್ಷ ಮುರಳೀಧರ್ ಸಿಎಚ್ ಸ್ವಾಗತಿಸಿದರು. ಯೋಗೀಶ್ ರಾವ್ ಕಾರ್ಯಕ್ರಮ ನಿರೂಪಿಸಿದರು.

-------------------

ದೇಶಭಕ್ತಿ,ದೈವ ಭಕ್ತಿಯನ್ನು ನೀಡಬೇಕು,ಮುಂದಿನ ದಿನಕ್ಕೆ ಒಗ್ಗಟ್ಟಿನ ಮಂತ್ರದೊಂದಿಗೆ ಈ ಕ್ಷಾತ್ರ ಸಂಗಮ ನಿರಂತರವಾಗಿ ನಡೆಯಲಿದೆ. ರಾಜಮನೆತನ ರಾಜರು ಆಗಮಿಸಿ ಈ ಕಾರ್ಯಕ್ರಮಕ್ಕೆ ಮೆರುಗು ತಂದಿರುವುದು ನಮ್ಮ ಕನಸು ನನಸಾದ ಕ್ಷಣ. ಒಟ್ಟಾಗಿ ಇರಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಮ್ಮ ಸಮುದಾಯದ ರಾಜ್ಯ, ಅರಸರಿಗೆ ಗೌರವ ಕೊಡುವ ಸಮುದಾಯ.

-ಕೃಷ್ಣ ಜೆ ಪಾಲೆಮಾರ್, ಮಾಜಿ ಸಚಿವ ಹಾಗೂ

ಕಾರ್ಯಕ್ರಮದ ಪ್ರಧಾನ ಸಲಹೆಗಾರ