ಜಿಲ್ಲೆ

ಡಿಜಿಟಲೀಕರಣದಿಂದ ಆಸ್ತಿ ದಾಖಲೆಗಳ ರಕ್ಷಣೆ ಕಾರ್ಯ

ನವಲಗುಂದ: ಭೂಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳನ್ನು ಗಣಕೀಕರಣ ಮಾಡುವ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಿಂದ ಸರ್ಕಾರದ ಭೂ ದಾಖಲಾತಿಗಳನ್ನು ಸಾರ್ವಜನಿಕರು ತಾವೇ ನೇರವಾಗಿ ಆನ್​ಲೈನ್ ಮೂಲಕ ನೋಡಬಹುದಾಗಿದೆ. ಅಲ್ಲದೆ, ಸಾರ್ವಜನಿಕರ ಆಸ್ತಿಗಳ ದಾಖಲೆಗಳನ್ನು ರಕ್ಷಿಸುವ ಕಾರ್ಯವೂ ಡಿಟಿಜಲೀಕರಣದಿಂದ ಆಗಲಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಪಟ್ಟಣದ ಹಳೇ ತಹಸೀಲ್ದಾರ್ ಕಚೇರಿಯಲ್ಲಿ ಹಳೆಯ ರೆಕಾರ್ಡ್​ಗಳನ್ನು ಡಿಜಿಟಲೀಕರಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನವಲಗುಂದ ತಹಸೀಲ್ದಾರ್ ಸುಧೀರ ಸಾವಕಾರ, ಅಣ್ಣಿಗೇರಿ ತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸದಸ್ಯರುಗಳಾದ ಜೀವನ ಪವಾರ, ಮೋದಿನ ಶಿರೂರ, ರೈತ ಹೋರಾಟಗಾರರಾದ ವೀರೇಶ ಸೊಬರದಮಠ, ಎಡಿಎಲ್​ಆರ್ ಹಿರೇಗೌಡರ, ಅಣ್ಣಿಗೇರಿ ಕಂದಾಯ ನಿರೀಕ್ಷಕ ರಿಶಿ ಸಾರಂಗಿ, ನವಲಗುಂದ ಕಂದಾಯ ನಿರೀಕ್ಷಕ ಕೆ.ಎಂ. ಪಾಟೀಲ, ನವಲಗುಂದ ಶಿರಸ್ತೇದಾರ ಕೃಷ್ಣಾ ಆರ್ಯಾರ, ಅಣ್ಣಿಗೇರಿ ಶಿರಸ್ತೇದಾರ್ ಕುನ್ನಬಾಯಿ, ಶಂಕ್ರು ಗಾಣಿಗೇರ, ಪ್ರಭಾಕರ ಮೋಹಿತೆ, ನವಲಗುಂದ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.