ಬಬಲೇಶ್ವರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಗಾರದಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಕರಪತ್ರ ಬಿಡುಗಡೆಗೊಳಿಸಲಾಯಿತು. ದಾನೇಶ ಅವಟಿ, ವಿಮಲಾಕ್ಷಿ ಹಿರೇಮಠ, ಕರುಣಾ ಮಣೂರ ಮತ್ತಿತರರಿದ್ದಾರೆ. 
ಜಿಲ್ಲೆ

ಮಕ್ಕಳ ರಕ್ಷಣೆ ಆದ್ಯ ಕರ್ತವ್ಯ

ವಿಜಯಪುರ: ಬಾಲ್ಯದಲ್ಲಿ ಮಕ್ಕಳು ಆಟ&ಪಾಠದೊಂದಿಗೆ ಹಾಡಿ ನಲಿಯುತ್ತ ಸ್ವಚ್ಛಂದವಾಗಿ ಬೆಳೆಯಬೇಕು. ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್​ ಸೇರಿ ಮತ್ತಿತರ ಯಾಂತ್ರಿಕ ವಸ್ತುಗಳಿಂದ ದೂರವಿರುವಂತೆ ನಿಗಾವಹಿಸಬೇಕೆಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ದಾನೇಶ ಅವಟಿ ಅಭಿಪ್ರಾಯಪಟ್ಟರು.

ಬಬಲೇಶ್ವರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸೇವಕ ಸಂಸ್ಥೆಯಿಂದ ನಡೆದ ಜನತೆ ಸಬಲೀಕರಣ ಮತ್ತು ಮಕ್ಕಳ ಹಕ್ಕುಗಳ ರಣೆ ಕುರಿತ ಒಂದು ದಿನದ ಕಾರ್ಯಗಾರದಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿ, ಶಿಕ್ಷಣದ ಜತೆಗೆ ಒಳ್ಳೆಯ ಸಂಸತಿ& ಸಂಸ್ಕಾರ ನೀಡುವಂತೆ ಪಾಲಕರು ಅಣಿಯಾಗಬೇಕು. ಮಕ್ಕಳ ಹಕ್ಕುಗಳ ರಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.

ಸೇವಕ ಸಂಸ್ಥೆ ಸಂಯೋಜಕಿ ವಿಮಲಾಕ್ಷಿ ಹಿರೇಮಠ ಮಾತನಾಡಿ, ನಮ್ಮ ಸಂಸ್ಥೆಯು ಹಳ್ಳಿಗಳಲ್ಲಿ ಅಪಾಯದ ಅಂಚಿನಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಶಿಕ್ಷಣ, ಕಾನೂನು, ಆರೋಗ್ಯ, ಪರಿಸರ ಸ್ವಚ್ಛತೆ ಮತ್ತಿತರರ ವಿಷಯಗಳ ಕುರಿತ ತಿಳಿವಳಿಕೆ ನೀಡುವ ಮೂಲಕ ಬಡವರಿಗೆ ಆರ್ಥಿಕ ಸಹಾಯ ಮಾಡುತ್ತಿದೆ ಎಂದರು.

ಕರುಣಾ ಮಣೂರ, ಸವಿತಾ ಇಟ್ಕರ್​ ಸ್ವಾಗತ ಗೀತೆ ಹಾಡಿದರು. ಇಂದಿರಾ ಪಾರಟಿ ಭಕ್ತಿ ಗೀತೆ ಹಾಡಿದರು. ಆಪ್ತ ಸಮಾಲೋಚಕಿ ಅಶ್ವಿನಿ ಆರ್​ ಕೋಟಿ ನಿರೂಪಿಸಿದರು. ಪ್ರೇಮಾ ದೊಡ್ಡಮನಿ ವಂದಿಸಿದರು.