ಕೊಕ್ಕರ್ಣೆ: ಬ್ರಾಹ್ಮಣ್ಯ ರಕ್ಷಣೆಗಾಗಿ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಬೇಕಿದ್ದು, ನಮ್ಮ ಮಕ್ಕಳಿಗೂ ಕಲಿಸಬೇಕು. ಜತೆಗೆ ಹೋರಾಟವೂ ಅನಿವಾರ್ಯ ಎಂದು ವಿದ್ವಾನ್ ಕೌಂಜೂರು ಚಂದ್ರಶೇಖರ ಅಡಿಗ ಹೇಳಿದರು.
ಮಂದಾರ್ತಿ ವಲಯ ಬ್ರಾಹ್ಮಣ ಮಹಾಸಭಾದ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ ಕುಮಾರ ಮಂಜ ಶುಭಹಾರೈಸಿದರು.
ವಿಶ್ವನಾಥ ಬಾಯರಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಭಾರ್ಗವ ಭಟ್ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಮಂಜುಶ್ರೀ ಅವರಿಗೆ ಪ್ರೋತ್ಸಾಹಧನ ನೀಡಲಾಯಿತು. ಪಶು ವೈದ್ಯಕೀಯ ಪರೀಕ್ಷಕ ಪುರುಷೋತ್ತಮ ಮಧ್ಯಸ್ಥ, ಹೈನುಗಾರಿಕೆ ಮತ್ತು ಕೃಷಿ ಕ್ಷೇತ್ರದ ಸಾಧಕ ಚೋರಾಡಿ ನೀಲಕಂಠ ಅಡಿಗ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇಗುಲ ಅರ್ಚಕ ಶ್ರೀಪತಿ ಅಡಿಗ ನೇತೃತ್ವದಲ್ಲಿ ಶ್ರೀ ಲಲಿತಾ ಸಹಸ್ರನಾಮ ಯಾಗ ಮತ್ತು ಪಾರಾಯಣ ನಡೆಯಿತು. ರಮೇಶ್ ಭಟ್ ಹೆಗ್ಗುಂಜೆ ಸ್ವಾಗತಿಸಿದರು. ಎಂ.ಗಣೇಶ ಅಡಿಗ ವಂದಿಸಿದರು. ಕಾರ್ಯದರ್ಶಿ ರಾಮಚಂದ್ರ ಉಡುಪ ಲೆಕ್ಕಪತ್ರ ಮಂಡಿಸಿದರು. ನಯನಾ ಶರ್ಮ ನಿರೂಪಿಸಿದರು.