ಬಿಡದಿ: ಬೈರಮಂಗಲ ಗ್ರಾಮದ ಬಳಿ ಇರುವ ಕೆಪಿಟಿಸಿಎಲ್ ಕಛೇರಿಯಲ್ಲಿ ನುಗ್ಗಿದ್ದ ಹೆಬ್ಬಾವೊಂದನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.
ಬುಧವಾರ ಇಲ್ಲಿನ ಕೆಪಿಟಿಸಿಎಲ್ ಕಚೇರಿಗೆ ಹೆಬ್ಬಾವು ನುಗ್ಗಿದೆ. ಈ ವೇಳೆ ಆತಂಕಗೊಂಡ ಸಿಬ್ಬಂದಿ ಏನು ಮಾಡಬೇಕು ಎನ್ನುವ ಗೊಂದಲಕ್ಕೆ ತುತ್ತಾಗಿದ್ದಾರೆ. ಅದರೆ ಯಾರೂ ಸಹ ಹಾವನ್ನು ಕೊಲ್ಲುವ ಕೆಲಸಕ್ಕೆ ಮುಂದಾಗದೆ ಸ್ಥಳೀಯವಾಗಿಯೇ ಇರುವ ಉರಗ ತಜ್ಞ ಸ್ನೇಕ್ ಗಿರಿಧರ್ ಅವರಿಗೆ ಕರೆ ಮಾಡಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಗಿರಿಧರ್, 9.5 ಅಡಿ ಉದ್ದ 15 ಕೆಜಿ ತೂಕದ ಹೆಬ್ಬಾವನ್ನು ಸೆರೆ ಹಿಡಿಯುವ ಮೂಲಕ ಕೆಪಿಟಿಸಿಎಲ್ನ ಸಿಬ್ಬಂದಿಯಲ್ಲಿ ಮೂಡಿದ್ದ ಆತಂಕವನ್ನು ದೂರ ಮಾಡಿದ್ದಾರೆ. ನಂತರ ಹೆಬ್ಬಾವನ್ನು ದಟ್ಟ ಅರಣ್ಯ ಪ್ರದೇಶಕ್ಕೆ ಗಿರಿಧರ್ ಸುರಕ್ಷಿತವಾಗಿ ಬಿಟ್ಟಿದ್ದಾರೆ.