ಮಂಗಳೂರು: ನಿರಂತರ ಸಾಹಿತ್ಯಿಕ ಚಟುವಟಿಕೆಯಿಂದ ಸಂಸ್ಕೃತಿಯ ಸಂರಕ್ಷಣೆ ಸಾಧ್ಯ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅಭಿಪ್ರಾಯಪಟ್ಟರು.
ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ ಇದರ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ ಮಂಗಳೂರಿನ ಬಿ. ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್ ಸಹಯೋಗದಲ್ಲಿ ನಗರದ ಉರ್ವ ಕಾ. ವಾ. ಆಚಾರ್ಯ ಸಂಸ್ಕೃತಿ ಕೇಂದ್ರದಲ್ಲಿ ಆಯೋಜಿಸಿದ್ದ ಗ್ರಂಥ ಲೋಕಾರ್ಪಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ಕೆ. ಆಚಾರ್ಯ ಅವರು ಬೆಳ್ಳಿ ಬೆಳಕು ಹಾಗೂ ’ವಿ. ಜಿ. ದೀಕ್ಷಿತ್ ಸಮಗ್ರ ಕೃತಿ ಸಂಪುಟ- ಭಾಗ 1 ಎಂಬ ಗ್ರಂಥಗಳನ್ನು ಬಿಡುಗಡೆಗೊಳಿಸಿದರು.ಬಿ. ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್‌ನ ಉಪಾಧ್ಯಕ್ಷ ಎಸ್. ವಿ. ಆಚಾರ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿಯ ಸಂಚಾಲಕ
ಭೀಮಸೇನ ಬಡಿಗೇರ್ ಪ್ರಸ್ತಾವನೆ ಗೈದರು. ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಹರೀಶ ಆಚಾರ್ಯ ಪಿ. ಶುಭ ಹಾರೈಸಿದರು. ಪ್ರೊ. ಜಿ. ಯಶವಂತ ಆಚಾರ್ಯ ಹಾಗೂ ಡಾ. ಸುಷ್ಮಾ ಪಿ. ಎಸ್. ಬಿಡುಗಡೆಯಾದ ಗ್ರಂಥಗಳ ಕುರಿತು ಪರಿಚಯ ಭಾಷಣ ಮಾಡಿದರು. ಬಿ. ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್‌ನ ಕಾರ್ಯದರ್ಶಿ ಡಾ. ಎಸ್. ಪಿ. ಗುರುದಾಸ್, ಕೋಶಾಧಿಕಾರಿ ಬಿ. ಎಚ್.ಯೋಗೀಶ್ ಆಚಾರ್, ಜತೆ ಕಾರ್ಯದರ್ಶಿ ಎ. ಜಿ. ಸದಾಶಿವ ಉಪಸ್ಥಿತರಿದ್ದರು. ಸಹ ಕೋಶಾಧಿಕಾರಿ ಯಜ್ಞೇಶ್ವರ ಆಚಾರ್ಯ ವಂದಿಸಿದರು. ಭರತ್‌ರಾಜ್ ಬೈಕಾಡಿ ಕಾರ್ಯಕ್ರಮ ನಿರೂಪಿಸಿದರು.