ಬಾಗಲಕೋಟೆ ನಗರದ ಮುಚಖಂಡಿ ಗ್ರಾಮದಲ್ಲಿ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ಶಿಬಿರ ಸಮಾರೋಪ ಸಮಾರಂಭದಲ್ಲಿ ಬಿವಿವಿ ಸಂಘದ ಆಡತಾಧಿಕಾರಿ ಡಾ.ವಿ.ಎಸ್. ಕಟಗಿಹಳ್ಳಿಮಠ ಮಾತನಾಡಿದರು. ವಿಶ್ರಾಂತ ಪ್ರಾಚಾರ್ಯ ಎನ್.ಆರ್. ಹಳ್ಳೂರ, ಸಂಗೀತ ವಿಭಾಗದ ಮುಖ್ಯಸ್ಥ ಡಾ.ಕೆ.ವಿ. ಮಠ, ಎಂ.ಎಚ್. ವಡ್ಡರ ಇತರರಿದ್ದರು. 
ಜಿಲ್ಲೆ

ರಾಷ್ಟ್ರ ಧರ್ಮ ಕಾಪಾಡಿ

ಬಾಗಲಕೋಟೆ: ಜೀವನದದಲ್ಲಿ ಸ್ವಾವಲಂಬಿಯಾಗಿ ಬದುಕಬೇಕಾದರೆ ವಿದ್ಯಾರ್ಥಿ ದೆಸೆಯಿಂದಲೆ ಕಲೆ, ಕೌಶಲ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕೆಂದು ಬಿವಿವಿ ಸಂಘದ ಆಡತಾಧಿಕಾರಿ ಡಾ.ವಿ.ಎಸ್. ಕಟಗಿಹಳ್ಳಿಮಠ ಹೇಳಿದರು.

ನಗರದ ಮುಚಖಂಡಿ ಗ್ರಾಮದಲ್ಲಿ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಏಳು ದಿನದ ವಾರ್ಷಿಕ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾವೆಲ್ಲರೂ ನಿಸರ್ಗದ ಕೂಸು. ನಿಸರ್ಗ ಕಾಪಾಡುವುದು ನಮ್ಮ ಹೊಣೆಯಾಗಿದ್ದು, ಸಮುದಾಯಗಳ ಅಮೃತಗೊಳಿಸುವ ಅರ್ಥಾತ್ ಶುದ್ಧಗೊಳಿಸುವ ಧ್ಯೇಯ ನಮ್ಮದಾಗಬೇಕು ಎಂದರು.

ಅನುಭವದ ಕಲಿಕೆಗಿಂತ ಮತ್ತೊಂದು ಶಿಕ್ಷಣವಿಲ್ಲ. ಶಿಬಿರಗಳು ಜೀವನದಲ್ಲಿ ಬರುವ ಸವಾಲುಗಳನ್ನು ಎದರಿಸುವ ಧೈರ್ಯ ಕಲಿಸುತ್ತವೆ. ತ್ಯಾಗ ಮತ್ತು ಸೇವಾ ಮನೋಭಾವದಿಂದ ಮಾಡುವ ಕೆಲಸಗಳು ಸಂತೃಪ್ತಿ ನೀಡುತ್ತವೆ ಎಂದು ಹೇಳಿದರು.

ಮುಧೋಳದ ಎಸ್.ಆರ್. ಕಂಠಿ ಮಹಾವಿದ್ಯಾಲದ ವಿಶ್ರಾಂತ ಪ್ರಾಚಾರ್ಯ ಎನ್.ಆರ್. ಹಳ್ಳೂರ ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಇದ್ದರೆ ಯಶಸ್ಸು ಸುಲಭವಾಗುತ್ತದೆ. ವಿದ್ಯಾರ್ಥಿಗಳು ಪ್ರೀತಿ, ಪ್ರೇಮದ ಬಂಧನಕ್ಕೊಳಗಾಗದೆ ತಂದೆ-ತಾಯಿ, ಗುರುಗಳ ನಂಬಿಕೆಗೆ ಅರ್ಹರಾಗಿ ಜೀವನ ನಡೆಸಬೇಕು. ರಾಷ್ಟ್ರಧರ್ಮ ಕಾಪಾಡಬೇಕು ಎಂದು ಹೇಳಿದರು.

ಪ್ರಾಚಾರ್ಯ ಎಸ್.ಆರ್. ಮೂಗನೂರಮಠ ಮಾತನಾಡಿ, ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿದ್ದರೆ ಏನಾನ್ನಾದರೂ ಸಾಧಿಸಬಹುದಾಗಿದೆ ಎಂದರು.
ಸಂಗೀತ ವಿಭಾಗದ ಮುಖ್ಯಸ್ಥ ಡಾ.ಕೆ.ವಿ. ಮಠ, ಎನ್. ಎಸ್. ಎಸ್. ಕಾರ್ಯಕ್ರಮಾಧಿಕಾರಿಗಳಾದ ಎಂ.ಎಚ್. ವಡ್ಡರ, ಡಾ. ವೀರುಪಾಕ್ಷ ಎನ್.ಬಿ. ಇತರರಿದ್ದರು.