ಸೊರಬ: ಕೆಲ ಜನಪ್ರತಿನಿಽ ಹಾಗೂ ಅರಣ್ಯ ಇಲಾಖಾ ಸಿಬ್ಬಂದಿ ಇಚ್ಛಾಶಕ್ತಿಯ ಕೊರತೆಯಿಂದ ಇಂದು ಪರಿಸರ ನಾಶಗೊಳ್ಳುತ್ತಿದೆ. ಜನಸಾಮಾನ್ಯರಿಗೆ ಪರಿಸರದ ಕಾಳಜಿ ಮೂಡಿಸುವಲ್ಲಿ ಪರಿಸರ ಸಂಘಟನೆಗಳು ಮುಂದಾಗಿರುವುದು ಶ್ಲಾಘನೀಯ ಎಂದು ವಕೀಲ ವೈ.ಜಿ.ಪುಟ್ಟಸ್ವಾಮಿ ಹೇಳಿದರು. ಗುರುವಾರ ಪಟ್ಟಣದ ಎಚ್‌ಪಿಆರ್ ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪರಿಸರ ಸಂಸ್ಥೆ ಏರ್ಪಡಿಸಿದ ಸಹ್ಯಾದ್ರಿ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮನುಷ್ಯ ಹಲವು ಕಟ್ಟುಪಾಡುಗಳನ್ನು ತಾನೇ ನಿರ್ಮಿಸಿಕೊಂಡು ಅಗತ್ಯವಿರುವ ಮರಗಳನ್ನು ಬಳಸಿಕೊಂಡು ಈ ಭೂಮಿಗೆ ಹಸಿರು ಹೊದಿಕೆಯನ್ನು ಉಳಿಸಿಕೊಟ್ಟವರು ಜನಸಾಮಾನ್ಯರು. ಕಾಲಕ್ರಮೇಣ ಯಾರದೋ ಸ್ವಾರ್ಥಕ್ಕೆ ದುರಾಸೆಗೆ ತಾನು ಬಲಿಯಾಗುವುದರ ಜತೆಗೆ ಪರಿಸರ ನಾಶ ಮಾಡುತ್ತಿದ್ದಾನೆ. ಇನ್ನಾದರು ಉಳಿದಿರುವ ಅರಣ್ಯ ಹಾಗೂ ಪರಿಸರ ಸಂಪತ್ತನು ಕಾಯ್ದುಕೊಳ್ಳುವುದು ಎಲ್ಲರ ಕರ್ತವ್ಯ ಎಂದರು. ಮುಖ್ಯ ಅತಿಥಿ ಹಿರಿಯ ವಕೀಲ ಎಂ.ಆರ್.ಪಾಟೀಲ್ ಪಶ್ಚಿಮ ಘಟ್ಟಗಳ ಉಳಿವಿನ ಔಚಿತ್ಯತೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು. ನರ್ಸಿಂಗ್ ಸ್ಕೂಲ್‌ನ ಮುಖ್ಯಸ್ಥ ಮಂಜುನಾಥ್, ದಿನಕರ ಭಾವೆ, ಮಹೇಶ ಗೋಖಲೆ, ಪರಿಸರ ನಾಶದ ದುಷ್ಪರಿಣಾಮಗಳ ಹಾಗೂ ಪುನಶ್ಚೇತನದ ಹಾದಿಯ ಕುರಿತು ಮಾತನಾಡಿದರು. ಸಾರ ಸಂಸ್ಥೆ ಸಂಚಾಲಕ ಧನುಷ್, ಪರಿಸರ ಕಾರ್ಯಕರ್ತ ಶ್ರೀಪಾದ ಬಿಚ್ಚುಗತ್ತಿ, ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು. ಮೇಘರಾಜ, ನರ್ಸಿಂಗ್ ಸ್ಕೂಲ್ ಉಪನ್ಯಾಸಕ, ಸಿಬ್ಬಂದಿ ಇದ್ದರು.