ಜಿಲ್ಲೆ

ಶಿಖರಜಿ, ಪಾಲಿತಾಣದ ಪಾವಿತ್ರೃಕ್ಕೆ ಧಕ್ಕೆ ತರಿದಿರಿ

Chitradurga

ಚಿತ್ರದುರ್ಗ: ಸಮ್ಮೇದ್ ಶಿಖರಜಿ ತೀರ್ಥಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಝಾರ್ಖಾಂಡ್ ರಾಜ್ಯ ಸರ್ಕಾರ ನಿರ್ಧಾರ ಹಾಗೂ ಗುಜರಾತ್‌ನ ಪಾಲಿತಾಣ ತೀರ್ಥ ಕ್ಷೇತ್ರದಲ್ಲಿ ತೀರ್ಥಂಕರರ ಪಾದುಕೆಗಳಿಗೆ ಹಾನಿ ಘಟನೆ ಖಂಡಿಸಿ ಜೈನ ಸಮುದಾಯದವರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ದೇಶವ್ಯಾಪಿ ಮುಷ್ಕರದ ಕರೆ ಹಿನ್ನೆಲೆಯಲ್ಲಿ ಗೋಡಿ ಪಾರ್ಶ್ವನಾಥ ಜೈನ್ ಶ್ವೇತಾಂಬರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿದ ಸಮುದಾಯದವರು, ಸಮ್ಮೇದ್ ಶಿಖರಜಿ ತೀರ್ಥಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಆದೇಶಿಸಿರುವ ಝಾರ್ಖಾಂಡ್ ಸರ್ಕಾರದ ನಿರ್ಧಾರ ನೋವನ್ನುಂಟು ಮಾಡಿದೆ ಎಂದರು.

ಪ್ರವಾಸಿ ತಾಣದ ಹೆಸರಲ್ಲಿ ಪವಿತ್ರ ಕ್ಷೇತ್ರದಲ್ಲಿ ಮೋಜು, ಮಸ್ತಿಗೆ ಅವಕಾಶ ನೀಡುವುದು, ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡಲಿದೆ. ಆದ್ದರಿಂದ ಝಾರ್ಖಾಂಡ್ ಸರ್ಕಾರ ಕೂಡಲೇ ತನ್ನ ಆದೇಶ ಹಿಂಪಡೆದು ತೀರ್ಥ ಕ್ಷೇತ್ರದ ಪಾವಿತ್ರೃತೆ ರಕ್ಷಿಸಬೇಕು ಎಂದು ಆಗ್ರಹಿಸಿದರು.

ಪಾಲಿತಾಣದಲ್ಲಿ ದಾಂಧಲೆ ನಡೆಸಿರುವ ದುಷ್ಟರನ್ನು ಬಂಧಿಸಿ, ಭಕ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿ ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವ ಹಾಗೂ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ರವಾನಿಸುವಂತೆ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದ ಲಕ್ಷ್ಮೀಬಜಾರ್ ಜೈನ ದೇವಾಲಯದಿಂದ ನೂರಾರು ಜನರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಗೆ ಕಚೇರಿ ಬಳಿ ಬಳಿ ಆಗಮಿಸಿ ಪ್ರತಿಭಟನೆ ನಡೆಸಿದರು. ಬಳಿಕ ಎಡಿಸಿ ಇ.ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.

ಆಚಾರ‌್ಯ ವಿರೇಶ್‌ಪ್ರಭಾಸ್‌ಶ್ರೀ ಜೀ, ವಿಫುಲ್ ಜೈನ್, ರಂಜಿತ್ ಪಾಟಿಯಾತ್, ಮಮತಾ, ಬಾಬುಲಾಲ್ ಎಸ್.ಜೈನ್, ರುಚಿತಾ, ಪ್ರೇಮಚಂದ್, ವಸಂತಬಾಯಿ, ಶೋಭಾಗ್‌ಚಂದ್, ಸಾನಿಕ್ ಜೈನ್, ಶೆರ್ನಿಕ್ ಪಾಟಿಯಾತ್, ದೀಪಕ್ ಜೈನ್ ಮತ್ತಿತರರು ಪಾಲ್ಗೊಂಡಿದ್ದರು.

(ಸಿಟಿಡಿ 21 ಸ್ಟ್ರೈಕ್ ಜೈನ್)

ಪವಿತ್ರ ಕ್ಷೇತ್ರಗಳಾದ ಸಮ್ಮೇದ್ ಶಿಖರಜಿ ಹಾಗೂ ಪಾಲಿತಾಣವನ್ನು ರಕ್ಷಿಸುವಂತೆ ಒತ್ತಾಯಿಸಿ ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದಿ ಜೈನ ಸಮುದಾಯದವರು ಎಡಿಸಿ ಇ.ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು. ರುಚಿತಾ, ವಿಫುಲ್‌ಜೈನ್, ವಸಂತಬಾಯಿ, ರಂಜಿತ್ ಪಾಟಿಯಾತ್, ಮಮತಾ, ಶೋಭಾಗ್ ಚಂದ್, ಪ್ರೇಮಚಂದ್, ದೀಪಕ್ ಜೈನ್, ಶೆರ್ನಿಕ್ ಪಾಟಿಯಾತ್ ಇದ್ದರು.