ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮ ನೆಲದ ಭಾಷೆ ಕನ್ನಡಕ್ಕೆ ಗೌರವ ಕೊಟ್ಟು ಈ ಭಾಷೆಯ ಸಂಸ್ಕೃತಿ ಮತ್ತು ಪರಂಪರೆ ರಕ್ಷಣೆಗೆ ಸಮಸ್ತ ಕನ್ನಡಿಗರೂ ಒಗ್ಗೂಡಿ ಶ್ರಮಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಬೆಂಗಳೂರಿನ ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸತಿಕ ಬಳಗದ ವತಿಯಿಂದ ನಗರದ ಆಲೂರು ವೆಂಕಟರಾವ್ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸಮ್ಮೇಳದ ಸರ್ವಾಧ್ಯಕ್ಷ ಪ್ರೊ. ಶಶಿಧರ ತೋಡಕರ ಮಾತನಾಡಿ, ಕನ್ನಡ ನಾಡಿನ ಐತಿಹಾಸಿಕ ಮಹತ್ವವನ್ನು ಎಲ್ಲರೂ ಅಧ್ಯಯನ ಮಾಡುವ ಅಗತ್ಯವಿದೆ. ಕನ್ನಡವನ್ನು ಎಲ್ಲರೂ ಪ್ರೀತಿಸಿ ಬಳಸಿದಾಗ ಉಳಿಸಲು ಸಾಧ್ಯ. ಕನ್ನಡ ಕೋಟಿ ಕೋಟಿ ಕನ್ನಡಿಗರ ಉಸಿರಾಗಬೇಕು ಎಂದರು.
ಕವಿವಿ ಸಿಂಡಿಕೇಟ್ ಸದಸ್ಯ ಶ್ಯಾಮ ಮಲ್ಲನಗೌಡರ ಮಾತನಾಡಿದರು. ಕವಿವಿ ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿ ಹಾಗೂ ವರಕವಿ ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯ ಡಾ.ಡಿ.ಎಂ. ಹಿರೇಮಠ ಲಾಂಛನಗಳನ್ನು ಬಿಡುಗಡೆ ಮಾಡಿದರು. ಕಡಲು ತೀರದ ಚೆಲುವೆ ಕೃತಿಯನ್ನು ಡಾ. ಎಂ.ಬಿ. ದಳಪತಿ ಲೋಕಾರ್ಪಣೆ ಮಾಡಿದರು. ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಎಸ್.ಡಿ.ಮುಡೆಣ್ಣವರ ಅಧ್ಯಕ್ಷತೆ ವಹಿಸಿದ್ದರು.
ಡಾ. ಶ್ರೀಧರ ಹೆಗಡೆ ಭದ್ರನ್, ಡಾ. ನಾಗೇಂದ್ರ ಪಿ., ರಾಕೇಶ ಹಿರೇಮಠ, ರಮೇಶ ಪರಿಟ್, ರಾಜು ದಳಪತಿ, ಸಂಗಮೇಶ್ವರ ಧಾರವಾಡ, ಶಿವಾನಂದ ಗಾಣಿಗೇರ, ಡಾ. ಶರಣಮ್ಮ ಗೋರೆಬಾಳ, ಶ್ರೀ ಬಸವರಾಜ ದೇವರು, ಜಂಪಾ ಲೋಬ್ಸಂಗ್ ಗುರೂಜಿ, ಆರ್.ಜಿ. ಮಾಂಗ್, ದ್ಯಾಮಣ್ಣ ಬಳಗಾನೂರ, ರಮೇಶ ಪವಾರ, ಇತರರು ಇದ್ದರು.