ಮೈಸೂರು: ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಪ್ರಾಸ್ಟೇಟ್ ಗ್ರಂಥಿ ಕಾಯಿಲೆ ಗುಣಪಡಿಸಲು ನಗರದ ಪ್ರತಿಷ್ಠಿತ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಲಾಗಿದೆ.
100 ವ್ಯಾಟ್ ಹೋಲ್ಮಿಯಂ ಲೇಸರ್ ಅಧಾರಿತ ಅತಿ ಕಡಿಮೆ ಆಕ್ರಮಣಕಾರಿ ಹಾಗೂ ಪರಿಣಾಮಕಾರಿ ಶಸ್ತ್ರಚಿಕಿತ್ಸೆಯ ಸೇವೆ ಇದಾಗಿದೆ. ನಿಖರ, ಕಡಿಮೆ ನೋವಿನ ಈ ಶಸ್ತ್ರಚಿಕಿತ್ಸೆಯಿಂದ ರೋಗಿಯು ಶೀಘ್ರವಾಗಿ ಚೇತರಿಸಿಕೊಳ್ಳುವುದು ಇದರ ವಿಶೇಷತೆಯಾಗಿದೆ.
ಮೂತ್ರ ವಿಸರ್ಜನೆಯಲ್ಲಿ ತೊಂದರೆ, ತುರ್ತು ಮೂತ್ರ ವಿಸರ್ಜನೆಯ ಅನುಭವ, ಮೂತ್ರ ವಿಸರ್ಜನೆ ಟ್ರಾೃಕ್ ಸೋಂಕು, ಮೂತ್ರ ಕೋಶದಲ್ಲಿ ಕಲ್ಲು ಇರುವುದು ಪ್ರಾಸ್ಟೇಟ್ ಕಾಯಿಲೆಯ ಗುಣಲಕ್ಷಣಗಳಾಗಿದೆ. ಈ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳು ಕೂಡಲೇ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರನ್ನು ಮೊ: 9538052378 ಸಂಖ್ಯೆಗೆ ಕರೆಮಾಡುವ ಮೂಲಕ ಸಂಪರ್ಕಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.