ತರೀಕೆರೆ ಮಿನಿ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಶ್ರೀ ಸಂತ ಸೇವಾಲಾಲ್ ಮಹಾರಾಜರ 285ನೇ ಜನ್ಮ ದಿನೋತ್ಸವ ಸಮಾರಂಭದಲ್ಲಿ ಎಸಿ ಡಾ. ಕೆ.ಜೆ.ಕಾಂತರಾಜ್ ಮಾತನಾಡಿದರು. ರಾಮಾನಾಯ್ಕ, ಡಿ.ಢಾಕ್ಯಾನಾಯ್ಕ, ಮಂಜಾನಾಯ್ಕ, ಟಿ.ಶಿವಮೂರ್ತಿನಾಯ್ಕ ಇತರರಿದ್ದರು. 
ಜಿಲ್ಲೆ

ಸಂತರ ಆದರ್ಶ ಪಾಲನೆಯಿಂದ ಸಮಾಜದ ಅಭ್ಯುದಯ

ತರೀಕೆರೆ: ಸಂತರ ತತ್ವ , ಸಿದ್ಧಾಂತ, ಆದರ್ಶ ಗುಣಗಳು ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜವಷ್ಟೇ ಅಲ್ಲ, ವೈಯಕ್ತಿಕ ಅಭ್ಯುದಯ ಕೂಡ ಸುಲಭವಾಗಲಿದೆ ಎಂದು ಎಸಿ ಡಾ. ಕೆ.ಜೆ.ಕಾಂತರಾಜ್ ಹೇಳಿದರು.

ಗುರುವಾರ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಶ್ರೀ ಸಂತ ಸೇವಾಲಾಲ್ ಮಹಾರಾಜರ 285ನೇ ಜನ್ಮ ದಿನೋತ್ಸವದಲ್ಲಿ ಮಾತನಾಡಿ, ಬಂಜಾರ ಸಂಸ್ಕೃತಿ ವಿಶಿಷ್ಟವಾಗಿದ್ದು, ಸಮುದಾಯದ ಆಚಾರ ವಿಚಾರ ಭಿನ್ನವಾಗಿದೆ. ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜೀವನಾದರ್ಶ ಇಂದಿನ ಪೀಳಿಗೆಗೆ ಮಾದರಿಯಾಗಬೇಕು. ಈ ದಿಸೆಯಲ್ಲಿ ಹಿರಿಯರಾದವರು ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಬಂಜಾರ ಸಂಘದ ತಾಲೂಕು ಅಧ್ಯಕ್ಷ ರಾಮಾನಾಯ್ಕ ಮಾತನಾಡಿ, ಸಮಾಜ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿದ್ದರೂ ಸಾಮಾಜಿಕ, ಆರ್ಥಿಕ, ಸಂಘಟನಾತ್ಮಕವಾಗಿ ಬಲಹೀನವಾಗಿದೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದಾದರೂ ಸಂಘಟಿತರಾಗಿ ಸರ್ಕಾರದ ಯೋಜನೆ ಸಮಪರ್ಕ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಮುಖರಾದ ಡಿ.ಢಾಕ್ಯಾನಾಯ್ಕ, ಸತ್ಯಪ್ಪ, ಟಿ.ಶಿವಮೂತಿನಾಯ್ಕ, ಮಂಜಾನಾಯ್ಕ, ಟಿ.ಚನ್ನಾನಾಯ್ಕ ಇತರರಿದ್ದರು.