ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳದ ಶಂಕರ ನೇಕಾರ ಸಹಕಾರಿ ಸೌಲಭ್ಯ ಕೇಂದ್ರದ ಸಭಾಭವನದಲ್ಲಿ ಕಲಾಂ ಅಲ್ಪಸಂಖ್ಯಾತ ಪತ್ತಿನ ಸಹಕಾರ ಸಂಘದಿಂದ ಆಯೋಜಿಸಿದ್ದ ಆರನೇ ವಾರ್ಷಿಕೋತ್ಸವ ಮಹಾಸಭೆಯಲ್ಲಿ ಸಂಘದ ಅತ್ಯುತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತು. ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್, ಸಂಘದ ಅಧ್ಯಕ್ಷ ಅಕ್ಬರಸಾಬ ಮುಲ್ಲಾ, ಉಪಾಧ್ಯಕ್ಷ ಬಾಬುಸಾಬ ಮುಲ್ಲಾ, ಪಿ.ಬಿ. ಕಾಳಗಿ, ಹುಸೇನ್ ಮುಲ್ಲಾ, ಜಾವೇದ ಇನಾಮದಾರ ಇತರರಿದ್ದರು. 
ಜಿಲ್ಲೆ

ಗ್ರಾಹಕರ ನಂಬಿಕೆಯಿಂದಲೇ ಸಹಕಾರಿ ಸಂಸ್ಥೆಗಳ ಏಳಿಗೆ

ಮುದ್ದೇಬಿಹಾಳ: ಸಹಕಾರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಘ, ಸಂಸ್ಥೆಗಳ ಏಳಿಗೆಗೆ ಗ್ರಾಹಕರು ಹೊಂದುವ ವಿಶ್ವಾಸ, ನಂಬಿಕೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಮುದ್ದೇಬಿಹಾಳ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್ ಹೇಳಿದರು.

ತಾಲೂಕಿನ ಹಿರೇಮುರಾಳದ ಶಂಕರ ನೇಕಾರ ಸಹಕಾರಿ ಸೌಲಭ್ಯ ಕೇಂದ್ರದ ಸಭಾಭವನದಲ್ಲಿ ಬುಧವಾರ ಕಲಾಂ ಅಲ್ಪಸಂಖ್ಯಾತ ಪತ್ತಿನ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ ಆರನೇ ವಾರ್ಷಿಕೋತ್ಸವ, ಸಾಧಕರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ವರ್ಷಕ್ಕಿಂತ ಈ ಆರ್ಥಿಕ ವರ್ಷದಲ್ಲಿ ಶೇ. 30ರಷ್ಟು ಠೇವಣಿ ಹೆಚ್ಚಳವಾಗಿದೆ ಎಂದರೆ ಆಡಳಿತ ಮಂಡಳಿ ಮೇಲೆ ಗ್ರಾಹಕರ ವಿಶ್ವಾಸ, ನಂಬಿಕೆ ಮುಖ್ಯ ಕಾರಣವಾಗಿದೆ. ಸಂಘದ ಬೆಳವಣಿಗೆಗೆ ಶೇರುದಾರರು, ಠೇವಣಿದಾರರು ನ್ಯೂನ್ಯತೆಗಳಿದ್ದರೆ ಆಡಳಿತ ಮಂಡಳಿ ಗಮನಕ್ಕೆ ತರಬೇಕು ಎಂದರು.

ಸಹಕಾರ ಇಲಾಖೆ ನಿವೃತ್ತ ಅಧಿಕಾರಿ ಪಿ.ಬಿ. ಕಾಳಗಿ ಮಾತನಾಡಿ, ತಾಲೂಕಿನಲ್ಲಿ ಹತ್ತಾರು ಸಹಕಾರ ಸಂಘಗಳ ಸ್ಥಾಪನೆಗೆ ಸಹಕಾರ ನೀಡಿದ್ದೇವೆ. ಒಂದು ಸಹಕಾರಿ ಸಂಸ್ಥೆ ಬೆಳವಣಿಗೆಯಾಗಲು ಆಡಳಿತ ಮಂಡಳಿ ಜಾಮೀನು ಸಾಲ ವಿತರಣೆ ಕಡಿಮೆ ಮಾಡಿ, ಆಸ್ತಿ ಭದ್ರತೆ ಸಾಲ ಹೆಚ್ಚಿಸಬೇಕು ಎಂದರು.

ಕಲಾಂ ಅಲ್ಪಸಂಖ್ಯಾತ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಕ್ಬರಸಾಬ ಮುಲ್ಲಾ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮಹ್ಮದಹನೀಫ ಹಿರೇಮನಿ ಸಂಘದ ಆರ್ಥಿಕ ವರ್ಷದ ಪ್ರಗತಿಯನ್ನು ಸಭೆಗೆ ವಿವರಿಸಿದರು.

ಜಮಿಯತೆ ಉಲೇಮಾ ಹಿಂದ್ ಉಪಾಧ್ಯಕ್ಷ ಅಲ್ಲಾಭಕ್ಷ್ಯ ಖಾಜಿ, ನಿವೃತ್ತ ಇಂಜಿನಿಯರ್ ಬಿ.ಬಿ. ಪಾಟೀಲ್, ನಾಗರಬೆಟ್ಟದ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿನ ಚೇರ್ಮನ್ ಬಿ.ಜಿ. ಮಠ, ಗಣ್ಯರಾದ ಪ್ರಸನ್ನಕುಮಾರ ಜಹಾಗೀರದಾರ, ಸುನೀಲಕುಮಾರ ಜಹಗೀರದಾರ, ಸಂಘದ ಉಪಾಧ್ಯಕ್ಷ ಬಾಬುಸಾಬ ಮುಲ್ಲಾ, ನಿರ್ದೇಶಕರಾದ ಜಾವೇದ್ ಮುಲ್ಲಾ, ಹುಸೇನ್‌ಭಾಷಾ ಮುಲ್ಲಾ, ಪೀರಸಾ ಮುಲ್ಲಾ, ಮಹೆಬೂಬ ಧನ್ನೂರ, ಇಮಾಮಸಾಹೇಬ ಮಲಗಲದಿನ್ನಿ, ಅಲ್ಲಾಭಕ್ಷೃ ಟಕ್ಕಳಕಿ, ಹುಸೇನಭಾಷಾ ತಾಳಿಕೋಟಿ, ಸುಲ್ತಾನಬೇಗಂ ಮುಲ್ಲಾ, ಶಮ್ಸಾದಬೇಗಂ ಮಕಾನದಾರ, ಅಮೀನಾಬೇಗಂ ಸುರಪುರ ಇದ್ದರು. ಎಚ್.ಎನ್. ಭೋವಿ ನಿರೂಪಿಸಿದರು. ಜೆ.ಡಿ. ಮುಲ್ಲಾ ಸ್ವಾಗತಿಸಿದರು. ಅಲ್ಲೀಸಾಬ ಸುರಪುರ ವಂದಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಂಘದ ಶೇರು ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಲಾಯಿತು. ಸಂಘದ ಉತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತು.