ಜಿಲ್ಲೆ

ಗಾಂಧಿ ಪ್ರತಿಮೆ ತೆರವಿಗೆ ಪರ-ವಿರೋಧ

ಕಾಂಗ್ರೆಸ್​, ಜೆಡಿಎಸ್​ ಮುಖಂಡರ ನಡುವೆ ವಾಕ್ಸ್​ಮರ

ಮಾಗಡಿ: ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಪ್ರತಿಮೆ ತೆರವುಗೊಳಿಸುವ ವಿಚಾರ ಕಾಂಗ್ರೆಸ್​, ಜೆಡಿಎಸ್​ ಮುಖಂಡರ ನಡುವೆ ಪರ-ವಿರೋಧ ವ್ಯಕ್ತವಾಗಿ ರಾಜಕೀಯ ತಿರುವು ಪಡೆದುಕೊಂಡಿದೆ.

ಕಾಂಗ್ರೆಸ್​ ಮುಖಂಡರು ತೆರವುಗೊಳಸಬೇಕೆಂದು ಒತ್ತ್ತಾಯಿಸಿದ್ದು, ಜೆಡಿಎಸ್​ ಮುಖಂಡರು ತೆರವು ಮಾಡದಂತೆ ತಡೆದು ಧರಣಿಗೆ ಮುಂದಾದರು. ಪರಿಸ್ಥಿತಿ ಉದ್ವೀಗ್ನಗೊಂಡಿದ್ದರಿಂದ ಸ್ಥಳಕ್ಕೆ ಪೊಲೀಸರು ಆಗಮಿಸಿ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಿರಾ ಎಂದು ಜೆಡಿಎಸ್​ ಧರಣಿ ನಿರತರರನ್ನು ಬಂಧಿಸಿ ಪ್ರಕರಣ ದಾಖಲಿಸಿದರು.

ಅ.2 ಗಾಂಧಿ ಜಯಂತಿ ಇದ್ದು, ಕಾರ್ಯಕ್ರಮದ ನಂತರ ಪ್ರತಿಮೆ ತೆರವುಗೊಳಿಸಿ, ವೃತ್ತವನ್ನು ಅಭಿವದ್ಧಿಪಡಿಸಲು ಅಡ್ಡಿಪಡಿಸುವುದಿಲ್ಲ. ಶಾಸಕರು ಅವರ ಸ್ವಂತ ಹಣದಿಂದ ಪ್ರತಿಮೆ ನಿರ್ಮಿಸುವುದು ಬೇಡ. ನಾವೇ ಅವರಿಗೆ ಬೇಕಾದಂತೆ ಪ್ರತಿಮೆ ಮಾಡಿಸಿಕೊಡುತ್ತೇವೆ ಎಂದು ಜೆಡಿಎಸ್​ ಮುಖಂಡರು ಪ್ರತಿಮೆ ತೆರವುಗೊಳಿಸದಂತೆ ಪಟ್ಟು ಹಿಡಿದರು. ಈ ವೇಳೆ ಪುರಸಭೆ ಅಧಿಕಾರಿಗಳೊಂದಿಗೆ ವಾಕ್ಸಮರ ನಡೆಸಿದರು. ಆದರೆ ಮುಖಂಡರ ಬೇಡಿಕೆಗೆ ಒಪ್ಪದಿದ್ದಾಗ ಪುರಸಭಾ ಸದಸ್ಯರಾದ ಎಂ.ಎನ್​.ಮಂಜುನಾಥ್​, ಜೆಡಿಎಸ್​ ಮುಖಂಡರಾದ ಡಿ.ಜಿ.ಕುಮಾರ್​, ಗ್ರಾಪಂ ಸದಸ್ಯರಾದ ಕೋಟಪ್ಪ, ರಂಗನಾಥ್​, ತಾಲೂಕು ಯುವ ಟಕ ಅಧ್ಯ ವಿಜಯಕುಮಾರ್​ ಅವರ ನೇತೃತ್ವದಲ್ಲಿ ಗಾಂಧಿ ಪ್ರತಿಮೆ ಮುಂದೆಯೇ ನ್ಯಾಯಕ್ಕಾಗಿ ಧರಣಿ ಕುಳಿತು ನ್ಯಾಯಬೇಕು ಎಂದು ೂಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಯುವ ಮುಖಂಡ ಕಾಗೆ ರಮೇಶ್​ ಮಾತನಾಡಿ, ಗಾಂಧಿ ಪ್ರತಿಮೆ ತೆರವುಗೊಳಿಸಲು ಯಾವುದೇ ಆದೇಶವಿಲ್ಲ. ಟೆಂಡರ್​ ನಡೆಸಿಲ್ಲ, ಜಿಲ್ಲಾಧಿಕಾರಿಗಳ ಅನುಮತಿ ಪಡೆಯದೇ ವೈಯಕ್ತಿಕ ಉದ್ದೇಶದಿಂದ ತೆರವು ಸರಿಯಲ್ಲ. ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಅ.2ಕ್ಕೆ ಗಾಂಧಿ ಜಯಂತಿ ಮುಗಿದ ನಂತರ ತೆರವುಗೊಳಿಸಿ, ನಂತರ ಇದೇ ಪ್ರತಿಮೆ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯೆ ಪತಿ ನರಸಿಂಹಮೂರ್ತಿ ಪ್ರತಿಮೆಗೆ ಹಾರ ಹಾಕಿ ಪ್ರತಿಮೆ ತೆರವುಗೊಳಿಸಲು ಚಾಲನೆ ನೀಡಿದರು. ಡಿವೈಎಸ್​ಪಿ ಪ್ರವಿಣ್​, ಸಿಪಿಐ ಗಿರಿರಾಜ್​, ಪಿಎಸ್​ಐ ಮನೋಜ್​ ಸ್ಥಳದಲ್ಲಿದ್ದು ಪ್ರತಿಮೆ ತೆರವಿಗೆ ರಣೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್​, ಇಂಜಿನಿಯರ್​ ಪ್ರಶಾಂತ್​ ಶೆಟ್ಟಿ ಹಾಗೂ ಇತರರಿದ್ದರು.

ರಾಜಕೀಯ ಪ್ರೇರಿತ ಆರೋಪಪುರಸಭಾ ಸದಸ್ಯ ಎಂ.ಎನ್​.ಮಂಜುನಾಥ್​ ಮಾತನಾಡಿ, 2018ರಲ್ಲಿ ಶಾಸಕರಾಗಿದ್ದ ಎ.ಮಂಜುನಾಥ್​ ಸ್ವಂತ ಹಣದಿಂದ ಗಾಂಧಿ ವೃತ್ತದಲ್ಲಿ ಮಹಾತ್ಮಗಾಂಧಿ ಪ್ರತಿಮೆ ಸ್ಥಾಪಿಸಿದ್ದರು. ಅಂದಿನಿಂದ ಅಲ್ಲೇ ಗಾಂಧಿ ಜಯಂತಿ ಆಚರಿಸಿಕೊಂಡು ಬರಲಾಗುತ್ತಿತ್ತು. ಇಲ್ಲಿ ಶಾಲೆ, ಕಾಲೇಜು ಹಾಗೂ ಸರ್ಕಾರಿ ಕಚೇರಿ ಇರುವುದರಿಂದ ಜನಸಂದಣಿ ಹೆಚ್ಚಿದೆ. ಗಾಂಧಿ ಪ್ರತಿಮೆಯ ಕಲ್ಲಿನ ಕೆಳಗೆ ಶಾಸಕ ಎ.ಮಂಜುನಾಥ್​ ಕೊಡುಗೆ ಎಂಬುದನ್ನು ಕೆತ್ತಿಸಲಾಗಿದೆ. ಇದರಿಂದ ಕಾಂಗ್ರೆಸ್​ ಶಾಸಕರು ಮುಜುಗರಕ್ಕೆ ಒಳಗಾಗುತ್ತಿದ್ದು, ಪುರಸಭೆಯ ಆಡಳಿತ ಮಂಡಳಿ ಸಭೆಯಲ್ಲಿ ಗಾಂಧಿ ಪ್ರತಿಮೆ ತೆರವಿನ ವಿಚಾರವಾಗಿ ಎಚ್ಚರಿಸಿದ್ದು, ಅಲ್ಲಿಯೂ ಕೂಡ ಪರ&ವಿರೋಧ ವ್ಯಕ್ತವಾಗಿತ್ತು. ಆದರೂ ಅಭಿವೃದ್ಧಿ ಹೆಸರಿನಲ್ಲಿ ತಂತ್ರರೂಪಿಸಿ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರ ಸಹಕಾರ ಪಡೆದು ಗಾಂಧಿ ಪ್ರತಿಮೆ ತೆರವುಗೊಳಿಸಿದ್ದಾರೆ ಎಂದರು.