ಮಂಗಳೂರು: ದೇಶ ಬ್ರಿಟಿಷರ ದಶಕಗಳ ಆಳ್ವಿಕೆಯಿಂದ ಬಿಡುಗಡೆಗೊಂಡು ಸ್ವಾತಂತ್ರೃ ಪಡೆಯಲು ಸಹಸ್ರಾರು ಹೋರಾಟಗಾರರು ಬಲಿದಾನವಾಗಿದ್ದಾರೆ. ದೇಶದ ಸಂಸ್ಕೃತಿ, ಪರಂಪರೆ ಮುಂದುವರಿಸಿ ಆರ್ಥಿಕ ಪ್ರಗತಿ ಮತ್ತು ಉಜ್ವಲ ಭವಿಷ್ಯಕ್ಕಾಗಿ ಕಠಿಣವಾಗಿ ಶ್ರಮಿಸಬೇಕು ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ.ದೇವದಾಸ್ ರೈ ಹೇಳಿದರು.
ಬಂಟ್ವಾಳ ತಾಲೂಕಿನ ಉರುಮನೆ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸ್ವಾತಂತ್ರೊೃೀತ್ಸವದ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಅಶ್ರಫ್, ಸದಸ್ಯ ಉಸ್ಮಾನ್, ಯುವ ಕಾಂಗ್ರೆಸ್ ಸಮಿತಿ ಸದಸ್ಯ ನಾಸಿರ್ ಸಾಮಾನಿಗೆ, ಶಿಕ್ಷಕರಾದ ರೂಪಿಯಾನ, ಜೂಲಿಯಾನ ಸಲ್ದಾನ, ಅಶ್ವಿನಿ ಉಪಸ್ಥಿತರಿದ್ದರು. ಶಿಕ್ಷಕ ಲೋಕಪ್ಪ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುಶ್ಮಿತಾ ವಂದಿಸಿದರು.
ಬಳಿಕ ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ವಿದ್ಯಾಸಿರಿ ಯೋಜನೆ ಹಾಗೂ ಸ್ವಾತಂತ್ರೋತ್ಸವ ಅಂಗವಾಗಿ 90 ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್ ಮತ್ತು ಆಟದ ಚೆಂಡುಗಳನ್ನು ವಿತರಿಸಲಾಯಿತು. ರೋಟರಿ ಪದಾಧಿಕಾರಿಗಳಾದ ರವಿ ಜಲನ್, ಜಗನ್ನಾಥ್ ಶೆಟ್ಟಿ, ಸಂತೋಷ್ ಶೇಟ್, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಣ ಸಾಮಗ್ರಿಗಳನ್ನು ವಸಂತ್ ಮಲ್ಯ ಪ್ರಾಯೋಜಿಸಿದ್ದರು.