ಜಿಲ್ಲೆ

ಮಾಸ್ಕ್ ಧರಿಸದವರಿಗೆ ದಂಡ: 200 ರೂ.ನಿಂದ 1 ಸಾವಿರ ರೂ.ಗೆ ಶೀಘ್ರ ಹೆಚ್ಚಳ!

ಬೆಂಗಳೂರು: ನಗರದಲ್ಲಿ ಕರೊನಾ ಸೋಂಕಿನ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದರೂ, ಮಾಸ್ಕ್ ಧರಿಸದೆ ಸಂಚಾರ ಮಾಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಮಾಸ್ಕ್ ಧರಿಸದವರಿಗೆ ಕೇವಲ 200 ರೂ. ಇರುವ ದಂಡವನ್ನು ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಈಗ ಇರುವ ದಂಡದ ಪ್ರಮಾಣವನ್ನು ಕನಿಷ್ಠ ಐದು ಪಟ್ಟು, ಅಂದರೆ ಒಂದು ಸಾವಿರ ರೂ.ಗೆ ಏರಿಸಲು ಅಧಿಕಾರಿಗಳು ತಯಾರಾಗಿದ್ದಾರೆ. ಆದರೆ ಸರ್ಕಾರ ಅಷ್ಟು ದೊಡ್ಡ ಮೊತ್ತಕ್ಕೆ ಅನುಮತಿ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.