ಜಿಲ್ಲೆ

ಬಿಬಿಎಂಪಿಯಿಂದ 85 ಕೋಟಿ ಮೌಲ್ಯದ ಸ್ವತ್ತು ವಶ

ಆರ್.ತುಳಸಿಕುಮಾರ್

ಬೆಂಗಳೂರು: ಹಲವು ವರ್ಷಗಳ ಬಳಕ ಇದೇ ಮೊದಲ ಬಾರಿಗೆ ಬಿಬಿಎಂಪಿಯು ತನಗೆ ಸೇರಿದ ಬೆಲೆಬಾಳುವ ಜಮೀನನ್ನು ಮಂಗಳವಾರ ಮರುವಶಕ್ಕೆ ಪಡೆಯುವಲ್ಲಿ ಸಲವಾಗಿದೆ.

ಯಲಹಂಕ ವಲಯದ ಬ್ಯಾಟರಾಯನಪುರ ವಿಭಾಗಕ್ಕೆ ಸೇರಿದ ಕೊಡಿಗೇಹಳ್ಳಿ ವಾರ್ಡ್‌ನಲ್ಲಿರುವ ಕೋತಿಹೊಸಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 52ರಲ್ಲಿ ಎರಡೂಮುಕ್ಕಾಲು ಎಕರೆ ವಿಸ್ತೀರ್ಣದ ಜಮೀನು ಪಾಲಿಕೆಗೆ ಸೇರಿತ್ತು. ಈ ಜಾಗವನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸಿ ಅನ್ಯರಿಗೆ ಬಾಡಿಗೆ ನಿಡಿದ್ದರು. ಈ ವಿಚಾರವಾಗಿ ಹಲವು ಬಾರಿ ಒತ್ತುವರಿದಾರರಿಗೆ ಎಚ್ಚರಿಕೆ ನೀಡಿದರೂ, ತೆರವುಗೊಳಿಸಲು ನಿರಾಕರಿಸಿ ನಕಲಿ ದಾಖಲೆ ತೋರಿಸಿ ಅಲ್ಲೇ ವಾಸ್ತವ್ಯ ಹೂಡಲು ಪ್ರಯತ್ನಿಸಿದ್ದರು.

ಯಲಹಂಕ ವಲಯದ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಯ ಸಹಯೋಗದೊಂದಿಗೆ ತೆರವು ಕಾರ್ಯಾಚರಣೆಯನ್ನು ಕೈಗೊಂಡು 85 ಕೋಟಿ ರೂ. ಮೌಲ್ಯದ ಸ್ವತ್ನನು ತನ ಸುಪರ್ದಿಗೆ ತೆಗೆದುಕೊಂಡಿದೆ.

ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ನಾಲ್ಕು ಜೆಸಿಬಿ, 6 ಟಿಪ್ಪರ್‌ಗಳು, 12 ಟ್ರಾಕ್ಟರ್‌ಗಳು, 140 ಪೊಲೀಸ್ ಸಿಬ್ಬಂದಿ, 70 ಮಂದಿ ಕಾರ್ಮಿಕರು ಮತ್ತು ಗ್ಯಾಂಗ್‌ಮನ್‌ಗಳ ಸಹಾಯದೊಂದಿಗೆ ಸ್ವತ್ತಿನಲ್ಲಿದ್ದ ಅನಧಿಕೃತ ಭಾಗಗಳನ್ನು ತೆಗೆದುಹಾಕಲು ಶ್ರಮಿಸಿದ್ದಾರೆ. ಕಾರ್ಯಾಚರಣೆ ಬಳಿಕ ಸ್ವತ್ತಿನ ಸುತ್ತಲೂ ಚೈನ್‌ಲಿಂಕ್ ಫೆನ್ಸಿಂಗ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಬೇಗನೆ ಕಾಮಗಾರಿ ಕೈಗೊಳ್ಳುವುದಾಗಿ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.