ಜಿಲ್ಲೆ

ಇಡೀ ಆಸ್ತಿ ಲಪಟಾಯಿಸಲು ಅಪ್ಪ, ಅಮ್ಮ ಹಾಗೂ ಸಹೋದರಿಯನ್ನು ಹತ್ಯೆ ಮಾಡಿ ಜೈಲಿಗೆ ನಡೆದ ಮಗ

kumarvrl

ವಿಜಯಪುರ: ಆಸ್ತಿಗಾಗಿ ವ್ಯಕ್ತಿಯೊಬ್ಬ ಅಪ್ಪ, ಅಮ್ಮ ಹಾಗೂ ಸಹೋದರಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ
ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿ ಬುಧವಾರ ನಡೆದಿದೆ.

ಗುರಲಿಂಗಪ್ಪ ಅರಕೇರಿ (85) ನಾಗವ್ವ ಅರಕೇರಿ (75) ಸಹೋದರಿ ಸಮುದ್ರಬಾಯಿ (60) ಎಂಬುವರನ್ನು ಮಗ ಸಿದ್ದಪ್ಪ ಅರಕೇರಿ ಹತ್ಯೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಗಡಿ ಭಾಗ ಮಹಾರಾಷ್ಟ್ರ ಜಿಲ್ಲೆಯ ಸಾಂಗ್ಲಿಯ ಉಮದಿ ತೋಟದ ಮನೆಯಲ್ಲಿ ಕೃತ್ಯ ನಡೆದಿದೆ. ಆಸ್ತಿಗಾಗಿ ಕುಟುಂಬದ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಬುಧವಾರ ನಡೆದ ಜಗಳ ತಾರಕಕ್ಕೇರಿ ಸಿದ್ದಪ್ಪ ಮೂವರನ್ನು ಹತ್ಯೆ ಮಾಡಿದ. ನಂತರ ನೇರವಾಗಿ ಉಮದಿ ಪೊಲೀಸ್​ ಠಾಣೆಗೆ ತೆರಳಿ ಶರಣಾದ.

ಠಾಣೆಗೆ ಬಂದು ಶರಣಾಗಿರುವ ಸಿದ್ದಪ್ಪ ವಿರುದ್ಧ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)