ಸಿಂಧನೂರಿನ ಸಾರ್ವಜನಿಕರ ಆಸ್ಪತ್ರೆಯಲ್ಲಿ ಗುರುವಾರ ವಿಶ್ವ ಕ್ಷಯ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು. ಟಿಎಚ್‌ಒ ಡಾ.ಅಯ್ಯನಗೌಡ ಪಾಟೀಲ್, ಹಿರಿಯ ಆರೋಗ್ಯ ಸಹಾಯಕರಾದ ರಂಗನಾಥ ಗುಡಿ, ಸಂಗನಗೌಡ ಪಾಟೀಲ್, ಕ್ಷಯ ರೋಗ ತಾಲೂಕು ಮೇಲ್ವಿಚಾರಕರಾದ ಯಮುನರಪ್ಪ, ಸುರೇಶರೆಡ್ಡಿ ವಿರುಪಾಪುರ ಇದ್ದರು. 
ಜಿಲ್ಲೆ

ಸೂಕ್ತ ಚಿಕಿತ್ಸೆಯಿಂದ ಕ್ಷಯಮುಕ್ತ

ನರೇಶ್ ಕುಮಾರ್

ಸಿಂಧನೂರು: ಕ್ಷಯರೋಗ ನಿರ್ಮೂಲನೆ ಮಾಡಲು ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಟಿಎಚ್‌ಒ ಡಾ.ಅಯ್ಯನಗೌಡ ಪಾಟೀಲ್ ಹೇಳಿದರು.

ನಗರದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಗುರುವಾರ ಜಿಲ್ಲಾಡಳಿತ ಮತ್ತು ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಅಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಿಂದ ಏರ್ಪಡಿಸಿದ್ದ ವಿಶ್ವ ಕ್ಷಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ಷಯರೋಗಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಪೌಷ್ಟಿಕ ಆಹಾರ ಸೇವನೆಗಾಗಿ ಸಹಾಯಧನ ನೀಡಲಾಗುತ್ತದೆ. ನಿರಂತರ 6 ತಿಂಗಳು ಸೂಕ್ತ ಚಿಕಿತ್ಸೆ ಪಡೆದರೆ ರೋಗದಿಂದ ಮುಕ್ತಿ ಪಡೆಯಬಹುದು. ತಾಲೂಕಿನ ಬೂತಲದಿನ್ನಿ, ಗಾಂಧಿನಗರ ಗ್ರಾಪಂ ಕ್ಷಯಮುಕ್ತವಾಗಿದ್ದು, ತಾಲೂಕಿನ ಎಲ್ಲ ಗ್ರಾಪಂಗಳನ್ನು ಟಿಬಿಮುಕ್ತಗೊಳಿಸಲು ಎಲ್ಲರೂ ಶ್ರಮ ವಹಿಸಬೇಕು ಎಂದು ತಿಳಿಸಿದರು.

ಹಿರಿಯ ಆರೋಗ್ಯ ಸಹಾಯಕರಾದ ರಂಗನಾಥ ಗುಡಿ, ಸಂಗನಗೌಡ ಪಾಟೀಲ್, ಕ್ಷಯ ರೋಗ ತಾಲೂಕು ಮೇಲ್ವಿಚಾರಕರಾದ ಯಮುನರಪ್ಪ, ಸುರೇಶರೆಡ್ಡಿ ವಿರುಪಾಪುರ, ಸಂಗಮೇಶ, ಹನುಮನಗೌಡ, ಸಿಬ್ಬಂದಿ ಅಶ್ವಿನಿ, ಲಿಂಗಪ್ಪ, ಮಲ್ಲಪ್ಪ ಇತರರಿದ್ದರು.