ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರದಲ್ಲಿ ಜೆಜೆಎಂ ಯೋಜನೆಯ ಕಾಮಗಾರಿಯನ್ನು ಜಿಪಂ ಸಿಇಒ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಮ್ ಷಾ ಪರಿಶೀಲಿಸಿದರು. ತಾ.ಪಂ.ಇಒ ಡಾ.ಜಿ.ಪರಮೇಶ್ವರಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ದೀಪಾ, ಎಇಇ ಬಸವರೆಡ್ಡಿ ಇತರರಿದ್ದರು. 
ಜಿಲ್ಲೆ

ಸಮರ್ಪಕವಾಗಿ ನಿರ್ವಹಣೆ ಮಾಡಿ

ಹಗರಿಬೊಮ್ಮನಹಳ್ಳಿ: ತಾಲೂಕಿನ ನಾನಾ ಕಡೆ ಜೆಜೆಎಂ ಯೋಜನೆಯಡಿ ಕೈಗೊಂಡಿರುವ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ವಿಜಯನಗರ ಜಿಪಂ ಸಿಇಒ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಮ್ ಷಾ ಸೋಮವಾರ ಪರಿಶೀಲಿಸಿದರು.

ಹೊಸ ಆನಂದದೇವನಹಳ್ಳಿ, ಆನೇಕಲ್ಲು, ಪಿಲ್ಲೋಬನಹಳ್ಳಿ, ದಶಮಾಪುರ, ಹೊಸಕೇರಿ ಗ್ರಾಮಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ ಉಪಯೋಗವಾಗುವಂತೆ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ತಾ.ಪಂ.ಇಒ ಡಾ.ಜಿ.ಪರಮೇಶ್ವರಪ್ಪ, ನರೇಗಾ ಸಹಾಯಕ ಅಧಿಕಾರಿ ರಮೇಶ ಮಹಾಲಿಂಗಪುರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ದೀಪಾ, ಎಇಇ ಬಸವರೆಡ್ಡಿ, ಜೆಇ ನಂದೀಶ, ದಶಮಾಪುರ ಗ್ರಾಪಂ ಅಧ್ಯಕ್ಷ ಎಸ್.ಮರಿಸ್ವಾಮಿ, ಉಪಾಧ್ಯಕ್ಷ ಡಿ.ಸುಮತಿ ಓಬಳೇಶ್, ಪಿಡಿಒ ರತ್ನಮ್ಮ, ಜಗಳೂರು ಕೊಟ್ರೇಶ, ಶಿವರಾಜ್, ನವೀನ್, ಹನಸಿ ಬ್ಯಾಂಕ್ ಮ್ಯಾನೇಜರ್ ಮಂಜುನಾಥ ಇತರರಿದ್ದರು.