ಜಿಲ್ಲೆ

ನಿಷೇಧಿತ ಪ್ಲಾಸ್ಟಿಕ್ ವಶ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಮಾರುಕಟ್ಟೆ ಪ್ರದೇಶದಲ್ಲಿ ವಲಯ ಕಚೇರಿ 2ರ ಅಽಕಾರಿಗಳು ಮಂಗಳವಾರ ಕಾರ್ಯಾಚರಣೆ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ. ನಿಖರ ಮಾಹಿತಿಯ ಮೇರೆಗೆ ಅಂಗಡಿಗಳ ಮೇಲೆ ದಾಳಿ ನಡೆಸಿ ವ್ಯಾಪಾರಸ್ಥರಿಂದ 3.5 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು 6,700 ರೂಪಾಯಿ ದಂಡ ವಿಽಸಲಾಯಿತು. ಇದೇರೀತಿ ಮುಂದುವರಿದರೆ ಟ್ರೇಡ್ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಾಕಾರ್ಯಾಚರಣೆಯಲ್ಲಿ ವಲಯ ಕಚೇರಿ 2ರ ಹಿರಿಯ ಆರೋಗ್ಯ ನಿರೀಕ್ಷಕರಾದ ಶಾಂತಗೌಡ ಬಿರಾದಾರ, ಫಕ್ಕೀರೇಶ ಬೂದಿಹಾಳ, ವಾರ್ಡ್ನ ಜಮಾದಾರರು ಮತ್ತು ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.

ಪಾಲಿಕೆಯಿಂದ ಅತಿಕ್ರಮಣ ತೆರವು ಕಾಯÁðಚರಣೆ:

ನಗರದ ವಾರ್ಡ್ ಸಂಖ್ಯೆ 14ರಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಮಂಗಳವಾರ ಅತಿಕ್ರಮಣ ತೆರವು ಕಾಕಾರ್ಯಾಚರಣೆ ನಡೆಸಿದರು. ವಲಯ ಆಯುಕ್ತ ಅರವಿಂದ ಜಮಖಂಡಿ ಅವರ ನೇತೃತ್ವದಲ್ಲಿ ವಾರ್ಡ್ ಸಂಖ್ಯೆ 14ರ ಮಾರುಕಟ್ಟೆ ಪ್ರದೇಶದಲ್ಲಿ ಪುಟ್‌ಪಾತ್ ಅತಿಕ್ರಮಣವನ್ನು ತೆರವು ಮಾಡಲಾಯಿತು. ಮತ್ತೆ ಅತಿಕ್ರಮಣ ಮಾಡದಂತೆ ಅಽಕಾರಿಗಳು ಎಚ್ಚರಿಕೆ ನೀಡಿದರು. ಮುಂಜಾಗ್ರತಾ ಕ್ರಮವಾಗಿ ಸಂಚಾರ ಠಾಣೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.