ಚಿಕ್ಕಬಳ್ಳಾಪುರ: ಸಬಲೀಕರಣಕ್ಕೆ ಪೂರಕವಾದ ಸವಲತ್ತುಗಳನ್ನು ಬಳಸಿಕೊಂಡು ಸರ್ವಾಂಗೀಣ ಪ್ರಗತಿ ಕಾಣಬೇಕು ಎಂದು ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್ ಭಾಸ್ಕರ್ ಸಲಹೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಸಂಜೀವಿನಿ ಡೇನಲ್ಮ್(ಡೇಎನ್‌ಆರ್‌ಎಲ್‌ಎಂ) ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ವಾರಾಟ ಮೇಳವನ್ನು ಉದ್ಘಾಟಿಸಿ ವಾತನಾಡಿದರು.
ಸಮಾಜದ ಮುಖ್ಯವಾಹಿನಿಗೆ ಬಾರದ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರವು ಸಂಜೀವಿನಿ ಡೇನಲ್ಮ್ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಸ್ವಸಹಾಯ ಸಂಗಳ ಮೂಲಕ ಸಂಟಿತರಾಗಿ, ವಿವಿಧ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಸ್ಥಳೀಯ ಉತ್ಪನ್ನಗಳನ್ನು ಮಾರಾಟ ಮಾಡಲು ಸೂಕ್ತ ವಾರುಕಟ್ಟೆ ವ್ಯವಸ್ಥೆ, ನಿರ್ವಹಣೆ ಕೌಶಲ ಅಗತ್ಯವಿರುತ್ತದೆ. ಇದರಿಂದ ಒಳ್ಳೆಯ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದರು.
ಜಿಪಂ ಮುಖ್ಯ ಯೋಜನಾ ನಿರ್ದೇಶಕ ಈಶ್ವರಪ್ಪ ವಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶದ ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರು ತಯಾರಿಸಿದ ವಿವಿಧ ಕರಕುಶಲ ವಸ್ತುಗಳು, ಆಹಾರ ಉತ್ಪನ್ನಗಳು, ಗಹೋಪಯೋಗಿ ವಸ್ತುಗಳ ಮಾರಾಟಕ್ಕೆ ಮಾರ್ಗದರ್ಶನ, ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಪ್ರಚಾರ ಸೇರಿ ವಿವಿಧ ನೆರವು ನೀಡಲಾಗುತ್ತಿದೆ ಎಂದರು.
ಜಿಪಂ ಉಪ ಕಾರ್ಯದರ್ಶಿ ಅತಿಕ್ ಪಾಷಾ, ಯೋಜನಾಧಿಕಾರಿ ಬಸವರಾಜಪ್ಪ, ಜಿಲ್ಲಾ ಕೌಶಲಾಧಿಕಾರಿ ಎಂ.ಪ್ರಸಾದ್, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕ ವೆಂಕಟೇಶರೆಡ್ಡಿ, ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ್, ಪೌರಾಯುಕ್ತ ಮನ್ಸೂರ್ ಅಲಿ, ಗೌರಿಬಿದನೂರು ತಾಪಂ ಇಒ ಹೊನ್ನಯ್ಯ ಮತ್ತಿತರರು ಇದ್ದರು.
ಪ್ರೋತ್ಸಾಹ ಅಗತ್ಯ
ಸಾಧಕ ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಯಶಸ್ಸಿಗೆ ಸಿಗುವ ಗೌರವವು ಸ್ವಯಂ ಉತ್ಸಾಹವನ್ನು ಹೆಚ್ಚಿಸುತ್ತದೆ. ಹಾಗೆಯೇ ಹೊಸಬರಿಗೆ ಸಾಧನೆ ತೋರಲು ಪ್ರೋತ್ಸಾಹವೂ ಸಿಕ್ಕಿದಂತಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ಸ್ವಸಹಾಯ ಗುಂಪಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿರುವ ಯಶಸ್ಸು ಸಾಧಿಸಿರುವ ಮಹಿಳೆಯರನ್ನು ನಿರಂತರವಾಗಿ ಸನ್ಮಾನಿಸಬೇಕು ಎಂದು ಡಾ.ಎನ್. ಭಾಸ್ಕರ್ ತಿಳಿಸಿದರು.
ಎರಡು ದಿನ ವಸ್ತು ಪ್ರದರ್ಶನ
ಮಹಿಳಾ ಸ್ವಸಹಾಯ ಸಂಗಳು ತೆರೆದಿದ್ದ ವಿವಿಧ ಉತ್ಪನ್ನಗಳ ಪ್ರದರ್ಶನ ಮಳಿಗೆಗಳನ್ನು ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್ ಉದ್ಘಾಟಿಸಿದರು. ಸ್ವಸಹಾಯ ಗುಂಪಿನ ಮಹಿಳೆಯರು ಸಿದ್ಧಪಡಿಸಿದ ಕಾಟನ್ ಸೀರೆಗಳು, ಸಿದ್ಧ ಉಡುಪುಗಳು, ಆಟಿಕೆ ಸಾವಾನು, ಖಾರ ಮತ್ತು ಸಿಹಿ ತಿನಿಸು, ಅಗರಬತ್ತಿ, ಅಗಸಿ ಚಟ್ನಿ, ಅರಿಶಿನಪುಡಿ, ಶ್ಯಾವಿಗೆ, ಮಸಾಲೆ ಮಜ್ಜಿಗೆ, ಗಹ ಅಲಂಕಾರಿಕ ವಸ್ತುಗಳು, ಲಂಬಾಣಿ ಉಡುಪುಗಳು, ಇಳಕಲ್ ಸೀರೆ, ಚಕ್ಕುಲಿ, ನಿಪ್ಪಟ್ಟು, ಶೇಂಗಾ ಚಿಕ್ಕಿ, ಮೈಸೂರು ಪಾಕ್ ಸೇರಿ ವಿವಿಧ ಉತ್ಪನ್ನಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಜತೆಗೆ ರಿಯಾಯಿತಿ ದರದಲ್ಲಿ ಮಾರಲಾಗುತ್ತಿದೆ. ಬುಧವಾರ ಸಹ ಮಾರಾಟ ಮೇಳ ನಡೆಯಲಿದೆ.
ರಾಜ್ಯದಲ್ಲಿ 16ನೇ ಸ್ಥಾನ
ಲೆಕ್ಕ ನಿರ್ವಹಣೆಯಲ್ಲಿ ಜಿಲ್ಲೆಯ ಮಹಿಳಾ ಸಂಗಳು ರಾಜ್ಯಮಟ್ಟದಲ್ಲಿ 16ನೇ ಸ್ಥಾನವನ್ನು ಗಳಿಸಿವೆ. ಜಿಲ್ಲೆಯ 10 ಸಾವಿರ ಸಂಗಳಲ್ಲಿನ 3.5 ಸಾವಿರ ಮಹಿಳೆಯರಿಗೆ 1.5 ಲಕ್ಷ ರೂ. ಸಮುದಾಯ ಬಂಡವಾಳ ನೀಡುತ್ತಿದ್ದು ವಿವಿಧ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿರುವ ಜಿಲ್ಲೆಯ 750 ಮಹಿಳೆಯರಿಗೆ 1 ಲಕ್ಷ ರೂ. ವೈಯಕ್ತಿಕ ಸಾಲ ಸಿಕ್ಕಿದೆ ಎಂದು ಡೇನಲ್ಮ್ ಜಿಲ್ಲಾ ವ್ಯವಸ್ಥಾಪಕ ವೆಂಕಟಾಚಲಪತಿ ತಿಳಿಸಿದರು.
ವಿದೇಶಗಳಲ್ಲೂ ಉತ್ಪನ್ನ ಮಾರಾಟ
ಜಿಲ್ಲೆಯ ಮಹಿಳೆಯರು ಗುಣಮಟ್ಟದ ವಿವಿಧ ಉತ್ಪನ್ನಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಸ್ಥಳೀಯವಾಗಿ ಹಪ್ಪಳ, ಉಪ್ಪಿನಕಾಯಿ, ಸಾಂಬಾರು ಪುಡಿ, ಗುಲ್ಕನ್, ಹುಣಸೆ ತೊಕ್ಕು , ಅಲಂಕಾರಿಕ ಲೆದರ್ ಕಪೇಟ್‌ಗಳನ್ನು ತಯಾರಿಸಿ, ವಾರುವ ಮೂಲಕ ಆರ್ಥಿಕವಾಗಿ ಪ್ರಗತಿ ಹೊಂದಿದ್ದಾರೆ. ಬಾಗೇಪಲ್ಲಿ ತಾಲೂಕಿನ ಈಶ್ವರಮ್ಮ, ಚಂದ್ರಕಲಾ, ಅಶ್ವತಮ್ಮ ಎಂಬುವರು ಚರ್ಮದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಜರ್ಮನಿ, ಜಪಾನ್, ನೆದರ್‌ಲ್ಯಾಂಡ್ ಸೇರಿ ಇತರ ದೇಶಗಳಲ್ಲಿ ವಾರುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದರು.