ಜಿಲ್ಲೆ

ಆರ್ಥಿಕ ಯೋಜನೆಗಳಿಂದ ಪ್ರಗತಿ ಸಾಧಿಸಬೇಕು

ಇಟಗಿ: ರೆತರು ಸರ್ಕಾರದಿಂದ ಸಿಗುವ ವಿವಿಧ ಆರ್ಥಿಕ ಯೋಜನೆಗಳ ಲಾಭ ಸಕಾಲದಲ್ಲಿ ಪಡೆದು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ತೋಲಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕಷಿ ಸಹಕಾರಿ ಸಂದ ಅಧ್ಯ ಮಾರುತಿ ಟಕ್ಕೇಕರ್​ ಹೇಳಿದರು.

ಸಮೀಪದ ತೋಲಗಿ ಗ್ರಾಮದಲ್ಲಿ ವಿವಿಧೋದ್ದೇಶ ಪಿಕೆಪಿಎಸ್​ ಸಂದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 65ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು. ಸಂ 76 ಲ ರೂ. ಷೇರು ಬಂಡವಾಳ, 1 ಕೋಟಿ ರೂ.ಗೂ ಹೆಚ್ಚು ಠೇವು ಹೊಂದಿದೆ ಎಂದರು. ಕಾರ್ಯದರ್ಶಿ ಮಧು ಕಂಗಾಳಿ, ಉಪಾಧ್ಯ ನಾಗಪ್ಪ ಗಾರಶನ್ನವರ, ನಿರ್ದೇಶಕರಾದ ಹುಸೇನಸಾಬ್​ ಪಾಶ್ಚಾಪುರ, ಪ್ರಕಾಶ ಕೂಗಿ, ಅಪ್ಪಯ್ಯ ದೊಂಡಪ್ಪನವರ, ಗುರುರಾಜ ಕೋಲೆಕಾರ, ಬಸಪ್ಪ ರಂಗಣ್ಣವರ, ಮಲ್ಲಪ್ಪ ಗೋಳೆಕಾರ, ದೇವಪ್ಪ ಗೂರನವರ, ಸುಮಾ ಚವ್ಹಣ್ಣವರ, ಮಲ್ಲವ್ವ ಸಾಲಿಮನಿ, ಬಸವರಾಜ ಗಿರಿಯಾಲ, ವಿಶ್ವನಾಥ ಚಿಕ್ಕಮಠ ಇತರರಿದ್ದರು.